ಬಾಗೇಪಲ್ಲಿ: ಬ್ಯಾಂಕಿನಿಂದ ಪಡೆದ ಸಾಲವನ್ನು ಸರ್ಕಾರ ಮನ್ನಾ ವಾಡುತ್ತದೆ ಎಂಬ ಮನೋಭಾವನೆಯಿಂದ ಹೊರಬಂದು ಸಾಲ ಮರು ಪಾವತಿಸಬೇಕು ಎಂದು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಎಲ್‌ಡಿ)ಅಧ್ಯಕ್ಷ ಎಸ್. ನರಸಿಂಹಾರೆಡ್ಡಿ ತಿಳಿಸಿದರು.
ಪಟ್ಟಣದ ಪಿಎಲ್‌ಡಿ ಬ್ಯಾಂಕ್ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ವಾತನಾಡಿ, ಬ್ಯಾಂಕ್‌ನಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲಸೌಲಭ್ಯ ಸಿಗಲಿದ್ದು, ರೈತರು ಪಡೆದ ಸಾಲವನ್ನು ಸದುಪಯೋಗಪಡಿಸಿಕೊಂಡು ಸಕಾಲಕ್ಕೆ ಮರುಪಾವತಿ ವಾಡಬೇಕು. ಇದರಿಂದ ಬೇರೆಯವರಿಗೆ ಸಾಲ ನೀಡಲು ಅನುಕೂಲವಾಗುವುದರ ಜತೆಗೆ ಬ್ಯಾಂಕ್ ಕೂಡ ಅಭಿವೃದ್ಧಿ ಪಥದಲ್ಲಿ ಸಾಗುತ್ತದೆ ಎಂದರು.
ಬ್ಯಾಂಕಿನ ಸಭೆಗಳಿಗೆ ಹಾಜರಾಗಬೇಕು ಹಾಗೂ ಸತತವಾಗಿ ವ್ಯವಹಾರ ನಡೆಸುತ್ತಿರಬೇಕು, ಅಂತಹವರಿಗೆ ವಾತ್ರ ಆಡಳಿತ ಮಂಡಳಿ ಚುನಾವಣೆಯಲ್ಲಿ ಮತದಾನದ ಹಕ್ಕು ಇರುತ್ತದೆ ಎಂದು ತಿಳಿಸುವ ಮೂಲಕ ಚುನಾವಣೆ ಸಮಯದಲ್ಲಿ ಮತದಾರ ಪಟ್ಟಿಯಲ್ಲಿ ಹೆಸರು ಇಲ್ಲದ ಕಾರಣದಿಂದ ಉದ್ದೇಶಪೂರ್ವಕವಾಗಿ ತೆಗೆದುಹಾಕಲಾಗಿದೆ ಎಂಬ ಆರೋಪಕ್ಕೆ ಬ್ಯಾಂಕ್ ವಾಜಿ ಅಧ್ಯಕ್ಷ ಶ್ರೀನಿವಾಸರೆಡ್ಡಿ ಉತ್ತರಿಸಿದರು.
ಸಾಲ ಕೊಟ್ಟವರಿಗೆ ಮತ್ತೆ ಮತ್ತೆ ಸಾಲ ನೀಡುವುದರಿಂದ ಬ್ಯಾಂಕ್‌ಗೆ ನಷ್ಟವಾಗುತ್ತದೆ. ಆದ್ದರಿಂದ ಎಲ್ಲರಿಗೂ ಸಾಲ ಸೌಲಭ್ಯ ದೊರೆಯುವಂತಾಗಲಿ ಎಂದು ನಿರ್ದೇಶಕ ಕೆ.ಆರ್. ಅಂಜಿನಪ್ಪ ಸಲಹೆಯಿತ್ತರು.
ಬ್ಯಾಂಕ್‌ಗೆ ಮೇಲಿಂದ ಮೇಲೆ ನಷ್ಟ ಆಗುತ್ತಿರುವ ಕುರಿತು ವಾಜಿ ಅಧ್ಯಕ್ಷ ಪಾತಕೋಟೆ ಸುಬ್ಬರೆಡ್ಡಿ ಪ್ರಸ್ತಾಪಿಸಿದರು. ವಾಜಿ ಅಧ್ಯಕ್ಷ ಬಿ.ನಾರಾಯಣರೆಡ್ಡಿ ವಾತನಾಡಿದರು. ವ್ಯವಸ್ಥಾಪಕ ಸಂತೋಷ್ ವಿ.ಚಚಡಿ ವರದಿ ಮಂಡಿಸಿದರು. ಶಶಿಧರ್ ಆಯ್ಯವ್ಯಯ ಮಂಡಿಸಿದರು. ಸಿಬ್ಬಂದಿ ಕರಿಂ ಮತ್ತು ಧರ್ಮಿಣಿ ವರದಿ ಓದಿದರು.
ನಿರ್ದೇಶಕರಾದ ನಾಗರತ್ನಮ್ಮ, ಲಕ್ಷ್ಮೀದೇವಮ್ಮ, ಆನಂದ, ಎಸ್.ಆರ್. ನಾಗರಾಜು, ಜಿ.ಆರ್. ಹರಿನಾಥ್, ವೆಂಕಟರವಣಪ್ಪ, ಷೇರುದಾರ ಬಿ.ಆರ್. ಕೃಷ್ಣ, ಬ್ಯಾಂಕ್ ಸಿಬ್ಬಂದಿ ಗಂಗರಾಜು ಇತರರಿದ್ದರು.