ಜಿಲ್ಲೆ

ಸಾಲಬಾಧೆಯಿಂದ ರೈತ ಆತ್ಮಹತ್ಯೆ!

ಪಟ್ಟನಾಯಕನಹಳ್ಳಿ: ಶಿರಾ ತಾಲೂಕಿನ ಬಂದಕುಂಟೆ ಗ್ರಾಪಂ ವ್ಯಾಪ್ತಿಯ ಗೋವಿಂದನಹಳ್ಳಿಯಲ್ಲಿ ರೈತರೊಬ್ಬರು ಶನಿವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ರೈತ ಜಯರಾಮಯ್ಯ (68) ಮೃತ. ಪಿಎಲ್​ಡಿ ಬ್ಯಾಂಕ್​ನಲ್ಲಿ 50 ಸಾವಿರ ರೂ. ಸಾಲ ಮಾಡಿದ್ದರು. ಬ್ಯಾಂಕ್​ನವರು ಹಣ ಕಟ್ಟುವಂತೆ ಒತ್ತಡ ಮಾಡುತ್ತಿದ್ದ ಕಾರಣ ಬೇರೆಯವರ ಹತ್ತಿರ ಕೈ ಸಾಲ ಮಾಡಿ ಇತ್ತೀಚೆಗೆ ಕಟ್ಟಿದ್ದರು. 2 ಎಕರೆ ಜಮೀನಿನಲ್ಲಿ ಇದ್ದ ಬೆಳೆ ನೀರಿಲ್ಲದೆ ಒಣಗಿದ ಕಾರಣ ಸಾಲಭಾದೆ ಜತೆಗೆ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮೃತರಿಗೆ ಪುತ್ರಿ, ಇಬ್ಬರು ಪುತ್ರರು ಇದ್ದಾರೆ. ಪಟ್ಟನಾಯಕನಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.