ಜಿಲ್ಲೆ

ಸಾಲಬಾಧೆಯಿಂದ ಬೇಸತ್ತು ರೈತ ಆತ್ಮಹತ್ಯೆ

ಕಿಕ್ಕೇರಿ: ಹೋಬಳಿಯ ಅಂಕನಹಳ್ಳಿ ಗ್ರಾಮದಲ್ಲಿ ರೈತರೊಬ್ಬರು ಸಾಲಬಾಧೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಗ್ರಾಮದ ಎ.ಎನ್. ಸುರೇಶ್(47) ಆತ್ಮಹತ್ಯೆ ಮಾಡಿಕೊಂಡವರು. ಜಮೀನಿನಲ್ಲಿ ಶುಂಠಿ, ಜೋಳ, ಕಬ್ಬು ಬೆಳೆ ಬೇಸಾಯ ಮಾಡಿದ್ದರು. ಹಲವು ರೈತರ ಜಮೀನುಗಳನ್ನು ಗುತ್ತಿಗೆ ಪಡೆದು ಬೇಸಾಯ ಮಾಡುತ್ತಿದ್ದರು. ಬೇಸಿಗೆ ಹಾಗೂ ಮಳೆ ಕೈಕೊಟ್ಟ ಕಾರಣ ಜಮೀನಿನಲ್ಲಿದ್ದ ಬೋರ್‌ವೆಲ್‌ನಲ್ಲಿ ನೀರು ಬಾರದೆ ಸಲು ಒಣಗಿ ಹಾಳಾಗಿತ್ತು.


ಬೇಸಾಯಕ್ಕಾಗಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ 1ಲಕ್ಷ ರೂ., ಗ್ರಾಮೀಣ ಕೂಟದಿಂದ 80 ಸಾವಿರ ರೂ., ಸೀ ಶಕ್ತಿ ಸಂಘಗಳಿಂದ 50 ಸಾವಿರ ರೂ., ಸತ್ಯ ಸಂಘದಿಂದ 50 ಸಾವಿರ ರೂ., ಬ್ಯಾಂಕ್ ಆ್ ಬರೋಡಾ ಸಾಸಲು ಶಾಖೆಯಿಂದ ಆಭರಣದ ಮೇಲೆ 3 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಸೋಮವಾರ ಸಂಜೆ ದೇವರಹಳ್ಳಿ ಗ್ರಾಮದ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಲಾಯಿತು. ಮೃತರಿಗೆ ಪತ್ನಿ, ಇಬ್ಬರು ಮಕ್ಕಳು ಇದ್ದಾರೆ. ಪತ್ನಿ ರತ್ನಾ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.