ಜಿಲ್ಲೆ

ಸಾಲದ ಸದ್ಬಳಕೆಯಿಂದ ಸ್ವಾವಲಂಬನೆ

ಚಿಟಗುಪ್ಪ: ಸರ್ಕಾರದಿಂದ ಬೀದಿ ವ್ಯಾಪಾರಸ್ಥರಿಗೆ ಸಿಗುವ ಸಾಲದ ಸದ್ಬಳಕೆ ಮಾಡಿಕೊಂಡು, ಆರ್ಥಿಕ ಸ್ವಾವಲಂಬನೆ ಹೊಂದಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಹುಸಾಮೋದ್ದಿನ್ ಬಾಬಾ ಹೇಳಿದರು.
ಪಟ್ಟಣದ ಪುರಸಭೆ ಕಚೇರಿಯಲ್ಲಿ ಪಿಎಂ ಸ್ವನಿಧಿ ಅಡಿ ಶುಕ್ರವಾರ ಬೀದಿ ಬದಿ ವ್ಯಾಪಾರಿಗಳಿಗಾಗಿ ಹಮ್ಮಿಕೊಂಡ ವಿಶೇಷ ಕಿರು ಸಾಲ ಮೇಳ, ಮೈ ಬಿ ಡಿಜಿಟಲ್ ಅಭಿಯಾನದಲ್ಲಿ ಮಾತನಾಡಿ, ಸರ್ಕಾರದಿಂದ ಬೀದಿ ವ್ಯಾಪಾರಸ್ಥರಿಗೆ ಸಿಗುವ ಸಾಲ ಸದ್ಬಳಕೆ ಮಾಡಿಕೊಂಡು, ೨ನೇ ಹಂತದಲ್ಲಿ ೨೦,೦೦೦ ರೂ., ೩ನೇ ಹಂತದಲ್ಲಿ ೫೦,೦೦೦ ರೂ. ಸಾಲ ಪಡೆದು ವಹಿವಾಟು ಹೆಚ್ಚಿಸಿ ಆರ್ಥಿಕವಾಗಿ ಸದೃಢರಾಗಬೇಕು ಎಂದರು.
ಬೀದರ್ ಕೌಶಲಾಭಿವೃದ್ಧಿ ಕಚೇರಿ ಅಭಿಯಾನ ವ್ಯವಸ್ಥಾಪಕ ಭೀಮಣ್ಣ ಮಾತನಾಡಿ, ನಗರದಲ್ಲಿರುವ ಎಲ್ಲ ಬ್ಯಾಂಕ್‌ಗಳ ಸಹಕಾರದಲ್ಲಿ ೩೫೯ ಫಲಾನುಭವಿಗಳಿಗೆ ಸಾಲ ವಿತರಿಸಿದ್ದು, ಡಿಜಿಟಲ್ ಮೂಲಕ ವ್ಯವಹಾರ ಮಾಡಿ ಸರಿಯಾದ ರೀತಿಯಲ್ಲಿ ಬ್ಯಾಂಕ್ ಸಾಲ ಮರು ಪಾವತಿಸಿ ಅಭಿವೃದ್ಧಿ ಹೊಂದಬೇಕು ಎಂದರು.
ಕರ್ನಾಟಕ ಬ್ಯಾಂಕ್‌ನಿAದ ಮಂಜೂರಾದ ನಾಲ್ವರು ಫಲಾನುಭವಿ ಬೀದಿ ವ್ಯಾಪಾರಸ್ಥರಿಗೆ ಸಾಲ ಮಂಜೂರಿ ಪತ್ರ ನೀಡಲಾಯಿತು. ವಿವಿಧ ಬ್ಯಾಂಕ್‌ನಿAದ ಮಂಜೂರಾದ ಕ್ಯೂ ಆರ್ ಕೋಡ್ ೬೦ ಜನರಿಗೆ ವಿತರಿಸಲಾಯಿತು.
ಭಾರತೀಯ ಸ್ಟೇಟ್ ಬ್ಯಾಂಕ್ ಕ್ಷೇತ್ರಾಧಿಕಾರಿ ರಾಜೇಂದ್ರಕುಮಾರ, ಡಿಸಿಸಿ ಬ್ಯಾಂಕ್‌ನ ಚಂದ್ರಶೇಖರ ಇತರರಿದ್ದರು. ಸಮುದಾಯ ಸಂಘಟಕ ರಾಮಚಂದ್ರ ಚಾವರೆ ಪ್ರಾಸ್ತಾವಿಕ ಮಾತನಾಡಿದರು. ಅಶ್ವಿನಿ ಸ್ವಾಗತಿಸಿದರು. ಮಂಜುಳಾ ವಂದಿಸಿದ್ದರು.