ಹಾಸನ: ಫೈನಾನ್ಸ್‌ನವರ ಕಿರುಕುಳ ಹಾಗೂ ಸಾಲಬಾಧೆ ತಾಳಲಾರದೆ ತಾಲೂಕಿನ ಜೋಡಿ ಮಲ್ಲಪ್ಪನಹಳ್ಳಿಯ ರೈತನೋರ್ವ ನೇಣಿಗೆ ಶರಣಾಗಿದ್ದಾರೆ.
ಗ್ರಾಮದ ವೆಂಕಟೇಗೌಡ (48) ಮೃತ ರೈತ.
ಖಾಸಗಿ ಫೈನಾನ್ಸ್‌ಗಳಿಂದ 3.70 ಲಕ್ಷ ರೂ. ಬ್ಯಾಂಕ್ ಹಾಗೂ ವ್ಯವಸಾಯ ಸಹಕಾರ ಸಂಘ ಮತ್ತು ಕೈ ಸಾಲ ಸೇರಿ 3.90 ಲಕ್ಷ ರೂ. ಸಾಲ ಮಾಡಿದ್ದರು. ಒಟ್ಟು 7.60 ಲಕ್ಷ ರೂ. ಸಾಲ ಇವರ ಮೇಲಿತ್ತು. ಒಂದೆಡೆ ಬ್ಯಾಂಕ್ ಇತರೆ ಮೂಲಗಳಿಂದ ಸಾಲ, ಮತ್ತೊಂದೆಡೆ ಫೈನಾನ್ಸ್‌ನವರು ಸಾಲ ಮರುಪಾವತಿ ಮಾಡುವಂತೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದರಿಂದ ಬೇರೆ ದಾರಿ ಕಾಣದೆ ಮನನೊಂದು ರೈತ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ಥಳಕ್ಕೆ ಗೊರೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.