ಜಿಲ್ಲೆ

ಸಾಲಕ್ಕೆ ಅಲೆದಾಡಿಸಿದರೆ ಕೂಡಲೇ ದೂರು ಸಲ್ಲಿಸಿ

ಚಿತ್ರದುರ್ಗ: ಸರ್ಕಾರದ ವಿವಿಧ ಯೋಜನೆಗಳಡಿ ಸಾಲಸೌಲಭ್ಯಕ್ಕಾಗಿ ಆಯ್ಕೆಯಾದ ಅಂಗವಿಕಲ ಫಲಾನುಭವಿಗಳನ್ನು ಬ್ಯಾಂಕ್‌ಗಳು ವಿನಾಕಾರಣ ಅಲೆದಾಡಿಸಿದರೆ ಕೂಡಲೇ ಅಂಗವಿಕಲರ ಕುಂದು ಕೊರತೆ ಕೋಶಕ್ಕೆ ದೂರು ನೀಡುವಂತೆ ಡಿಸಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿ ದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಮಾತನಾಡಿ,ಸಾಲಕ್ಕೆ ಅಲೆದಾಡಿಸುವ ಬ್ಯಾಂಕ್‌ಗಳಿಗೆ ಪ್ರತ್ಯೇಕ ನಿರ್ದೇಶನ ನೀಡಬೇಕು. ಸಾಲ-ಸೌಲಭ್ಯ ದೂರುಗಳ ಬ ಗ್ಗೆ ಮುಂದಿನ ಸಭೆಯಲ್ಲಿ ಅನುಪಾಲನಾ ವರದಿ ಮಂಡಿಸುವಂತೆ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗೆ ನಿರ್ದೇಶಿಸಿದರು.

ಸಬಲೀಕರಣ,ಹಕ್ಕುಗಳ ಸಂರಕ್ಷಣೆಯೊಂದಿಗೆ ಅಂಗವಿಕಲರ ಮುಖ್ಯವಾಹಿನಿಗೆ ತರ ಬೇಕು. ವಿವಿಧ ಇಲಾಖೆಗಳಡಿ ದೊರೆಯುವ ಸೌ ಲಭ್ಯಗಳ ಹಾಗೂ ಮೀಸಲಾತಿ ಅನುಷ್ಠಾನ ಮಾಹಿತಿ ನೀಡಬೇಕು. ಕುಂದುಕೊರತೆ ನಿವಾರಣೆಗೆ ಪ್ರತಿ ತಿಂಗಳು ಹಾಗೂ ಗ್ರಾಮೀಣ ಮತ್ತು ನಗರ,ತಾಪಂ ವಿ.ಆರ್.ಡಬ್ಲ್ಯೂ,ಯು.ಆರ್.ಡಬ್ಲ್ಯೂ,ಎಂ.ಆರ್.ಡಬ್ಲ್ಯೂ ಅವರ ಪ್ರತ್ಯೇಕ ಸಭೆಗಳನ್ನು ನಡೆಸಬೇಕೆಂದರು.

ಜಿಲ್ಲೆಯಲ್ಲಿ 2011ರ ಜನಗಣತಿ ಪ್ರಕಾರ 35,971 ಜನ ಅಂಗವಿಕಲರಿದ್ದಾರೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಹೇಳಿದರು. ಜಿಲ್ಲೆಯಲ್ಲಿ ದೃಷ್ಟಿದೋಷವುಳ್ಳ 6,196, ಶ್ರವಣದೋಷ-6,096, ಮಾತಿನ ದೋಷ-2,880, ಮಾನಸಿಕ ಅಸ್ವಸ್ಥರು-415, ಬುದ್ದಿಮಾಂಧ್ಯರು-2,461, ದೈಹಿಕ ಅಂಗವಿಕಲರು-8,373, ಬಹುವಿಧದ ಅಂಗವಿಕಲರು-2,961 ಹಾಗೂ ಇತರೆ ಅಂಗವಿಕಲರು 6,589 ಸೇರಿದಂತೆ 35,971 ಅಂಗವಿಕಲರಿದ್ದಾರೆ. ಈ ಪೈಕಿ 33,075 ಅಂಗವಿಕಲರಿಗೆ ಯುಡಿಐಡಿ ಗುರುತಿನ ಕಾರ್ಡ್ ವಿತರಿಸಲಾಗಿದೆ ಎಂದರು.ರಣೆ ಮಾಡಲಾಗಿದೆ ಎಂದರು.

ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ 100 ಕಿ.ಮೀ.ವ್ಯಾಪ್ತಿಯಲ್ಲಿ ಪ್ರಯಾಣಿಸಲು ರಿಯಾಯಿತಿ ದರದಲ್ಲಿ ಬಸ್‌ಪಾಸ್ ಸೇವಾ ಸಿಂಧು ತಂತ್ರಾ ಶದಲ್ಲಿ ಅರ್ಜಿ ಸಲ್ಲಿಸಬೇಕು. ಖಾಸಗಿ ಕಂಪ್ಯೂಟರ್ ಸೆಂಟರ್‌ಗಳಲ್ಲಿ ನವೀಕರಣ ಅರ್ಜಿಗೆ 100 ರೂ.ಶುಲ್ಕ ವಿಧಿಸಲಾಗುತ್ತಿದೆ. ಫಲಾನುಭ ವಿಗಳು ಡಿಸಿ ಗಮನಕ್ಕೆ ತಂದರು. ಗ್ರಾಮ ಒನ್‌ಸೆಂಟರ್‌ಗಳಲ್ಲಿ ಉಚಿತವಾಗಿ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸುವುದಾಗಿ ಡಿಸಿ ಹೇಳಿದರು.

ಶಕ್ತಿ ಯೋಜನೆ ಮಾದರಿ ಅಂಗವಿಕಲರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವ ಪ್ರಸ್ತಾವನೆ ಇರುವುದಾಗಿ ತಿಳಿದು ಬಂದಿದೆ ಎಂದು ವೈಶಾಲಿ ಹೇಳಿದರು. ಜಿಲ್ಲೆಯ ಅಂಗವಿಕಲರ ಪುನರ್ವಸತಿ ಕೇಂದ್ರದ ಸಮರ್ಪಕ ನಿರ್ವಹಣೆಗೆ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳು ವಂತೆ ಡಿಸಿ ಸೂಚಿಸಿದರು. ಖಾಲಿ ಇರುವ ತಜ್ಞ ವೈದ್ಯರ ಹುದ್ದೆ ಹಾಗೂ ಇತರೆ ವೈದ್ಯಕೀಯ ಸಿಬ್ಬಂದಿ ನೇಮಕದ ಕುರಿತು ಪ್ರಚಾರ ನೀಡ ಬೇಕೆಂದು ಜಿ.ಪಂ.ಸಿಇಒ ಎಸ್.ಜೆ.ಸೋಮಶೇಖರ್ ಹೇಳಿದರು.

ಎಸಿ ಎಂ.ಕಾರ್ತಿಕ್,ಎಎಸ್‌ಪಿ ಎಸ್.ಜೆ.ಕುಮಾರಸ್ವಾಮಿ, ಆರ್‌ಟಿಪಿ ಭರತ್ ಎಂ.ಕಾಳಿಸಿಂಗೆ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್ ಮತ್ತಿತರರು ಇದ್ದರು.

ಎಲ್ಲ ತಾಲೂಕಲ್ಲೂ ಹಿರಿಯರ ಹಗಲು ಯೋಗ ಕ್ಷೇಮ?

ಹಿರಿಯ ನಾಗರಿಕರಿಗೆ ಆರೋಗ್ಯ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಲು ಹಿರಿಯೂರಲ್ಲಿ ಹಗಲು ಯೋಗಕ್ಷೇಮ ಕೇಂದ್ರವನ್ನು ತೆರೆಯಲಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಧಿಕಾರಿ ಜೆ.ವೈಶಾಲಿ ತಿಳಿಸಿದರು. ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಿಗೂ ಹಗಲು ಯೋಗಕ್ಷೇಮ ಕೇಂದ್ರಗಳ ಪ್ರಾರಂಭಿಸುವುದರ ಸಾಧ್ಯತೆ ಕುರಿತು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ನಿರ್ದೇಶಿಸಿದರು.