ಜಿಲ್ಲೆ

ಸಾಲ ವಸೂಲಾತಿಯಲ್ಲಿ ರಾಜ್ಯದಲ್ಲಿ ೬ನೇ ಸ್ಥಾನ

ಯಾದಗಿರಿ: ಇಲ್ಲಿನ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ೨೦೨೩-೨೪ನೇ ಸಾಲಿನಲ್ಲಿ ರೈತರ ಕೃಷಿ ಕ್ಷೇತ್ರ ಅಭಿವೃದ್ಧಿಗಾಗಿ ನೀಡಿರುವ ಸಾಲ ವಸೂಲಾತಿಯಲ್ಲಿ ರಾಜ್ಯದಲ್ಲಿಯೇ ನಾವು ೬ನೇ ಸ್ಥಾನದಲ್ಲಿz್ದೆÃವೆ ಎಂದು ಬ್ಯಾಂಕ್‌ನ ಅಧ್ಯP್ಷÀ ಮಲ್ಲಣ್ಣಗೌಡ ಮಾಲಿ ಪಾಟೀಲï ಹೇಳಿದರು.

ಬುಧವಾರ ಬ್ಯಾಂಕ್‌ನಲ್ಲಿ ಪ್ರಸಕ್ತ ಸಾಲಿನ ೬೬ನೇ ವಾರ್ಷಿಕ ಮಹಾಸಭೆಯ ಅಧ್ಯP್ಷÀತೆ ವಹಿಸಿ ಮಾತನಾಡಿದ ಅವರು, ಈ ಸಾಲಿನಲ್ಲಿ ಸದಸ್ಯರಿಗೆ ೧.೬೨ ಕೋಟಿ ರೂ. ಸಾಲ ವಿತರಿಸಲಾಗಿತ್ತು, ಅದರಲ್ಲಿ ೧.೧೪ ಕೋಟಿ ರೂ. (ಶೇ. ೯೩.೨೭) ವಸೂಲಾತಿ ಮಾಡುವ ಮೂಲಕ ಬ್ಯಾಂಕ್‌ನ ಆರ್ಥಿಕ ಪರಿಸ್ಥಿತಿ ಹಲವಾರು ತೊಂದರೆಗಳ ನಡುವೆಯೂ ಉತ್ತಮವಾಗಿದೆ ಎಂದು ತಿಳಿಸಿದರು.

ರೈತರು ಪಡೆದ ಸಾಲ ಸಕಾಲಕ್ಕೆ ಮರು ಪಾವತಿಸಿದರೆ, ಅವರಿಗೆ ೨೫ ಪೈಸೆ ಬಡ್ಡಿ ಪಾವತಿಸಬೇಕಾಗುತ್ತದೆ, ತಪ್ಪಿದ್ದಲ್ಲಿ ೧.೫೦ ರೂ. ಹೆಚ್ಚಿನ ಬಡ್ಡಿ ತೆರಬೇಕಾಗುತ್ತದೆ, ಕಾರಣ ಎಲ್ಲರೂ ಸಹಕಾರ ನೀಡಬೇಕು ಅಂದಾಗ ಮಾತ್ತ ಬ್ಯಾಂಕ್ ಆರ್ಥಿಕವಾಗಿ ಪ್ರಗತಿ ಸಾಧಿಸಲು ಸಹಕಾರಿಯಾಗುತ್ತದೆ ಎಂದರು.

ಈ ಸಾಲಿನಲ್ಲಿ ಕೂಡ ಬ್ಯಾಂಕ್‌ನಿAದ ರೈತರಿಗೆ ಭೂ ಅಭಿವೃದ್ಧಿಪಡಿಸಿಕೊಳ್ಳಲು, ಟ್ರಾÈಕ್ಟರ್ ಖರೀಧಿಸಲು, ತಮ್ಮ ಜಮೀನುಗಳಿಗೆ ತಂತಿ ಬೇಲಿ ಹಾಕಿಕೊಳ್ಳಲು ಹಾಗೂ ಇನ್ನೀತರ ಕಾಮಗಾರಿಗಳಿಗೆ ೫೦ ಲP್ಷÀ ರೂ. ಸಾಲ ನೀಡಲಾಗಿದೆ. ಇನ್ನೂ ಹಲವಾರು ಸದಸ್ಯರು ಸಾಲಕ್ಕಾಗಿ ಅರ್ಜಿ ಸಲ್ಲಿಸಿz್ದÁರೆ. ನಾವೂ ಆಡಳಿತ ಮಂಡಳಿ, ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ, ಅರ್ಹ ವ್ಯಕ್ತಿಗಳಿಗೆ ಸಾಲ ವಿತರಿಸಲಾಗುವುದು ಎಂದು ತಿಳಿಸಿದರು.

ನಗರದಲ್ಲಿರುವ ಸಣ್ಣ-ಪುಟ್ಟ ವ್ಯಾಪಾರಸ್ಥರು ಬ್ಯಾಂಕ್‌ನಲ್ಲಿ ದಿನಾಲೂ ತಾವೂ ಉಳಿತಾಯ ಮಾಡಿದ ಹಣವನ್ನು ಪಿಗ್ಮಿ ರೂಪದಲ್ಲಿ ತುಂಬುವ ಮೂಲಕ ಅವರು ಕೂಡ ಆರ್ಥಿಕವಾಗಿ ಬದಲಾವಣೆ ಸಾಧಿಸುತ್ತಿz್ದÁರೆ ಎಂದು ಹೇಳಿದರು.

ಬ್ಯಾಂಕ್‌ನ ಉಪಾಧ್ಯP್ಷÀ ವಿಶ್ವನಾಥ ನೀಲಹಳ್ಳಿ ಮಾತನಾಡಿ, ೨೦೨೩-೨೪ನೇ ಸಾಲಿನಲ್ಲಿ ಕೈಗೊಂಡಿರುವ ಚಟುವಟಿಕೆಗಳನ್ನು ವಿವರಿಸಿ ಅಭಿವೃದ್ದಿಗಾಗಿ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ಬ್ಯಾಂಕ್‌ನ ವ್ಯವಸ್ಥಾಪಕರಾದ ಅಯ್ಯಣರಡ್ಡಿ ನಾಯ್ಕಲï ವಾರ್ಷಿಕ ಮಹಾಸಭೆಯ ಸಮಗ್ರ ವರದಿ ವಾಚಿಸಿದರು.ಹಲವಾರು ಸದಸ್ಯರು ತಮ್ಮ ಸಮಸ್ಯೆಗಳನ್ನು ಪ್ರಸ್ಥಾಪಿಸುವ ಮೂಲಕ ಅಧ್ಯP್ಷÀರ ಜೊತೆ ಚರ್ಚಿಸಿ ಪರಿಹಾರ ಕಂಡುಕೊAಡರು.

ಆಡಳಿತ ಮಂಡಳಿ ಸದಸ್ಯರಾದ ಆರ್. ಮಹಾದೇವಪ್ಪಗೌಡ ಅಬ್ಬೆತುಮಕೂರ, ಶ್ರೀಧರಕುಮಾರ ಈಟಗಿ, ಶರಣಪ್ಪ ಕೋಲಕರ್, ತಿಮ್ಮಣ್ಣ ಬಡಿಗೇರ, ಮರೆಪ್ಪ ಬೇಗಾರ, ಬನ್ನಯ್ಯ ಹಳಿಗೇರಾ, ಸೋಮಶೇಖರ ಸಾಹುಕಾರ, ರಾಮಚಂದ್ರಪ್ಪ ಮುಂಡರಗಿ ಇತರರಿದ್ದರು. ಕಲ್ಪನಾ ಕೊಂಬಿನ್ ಸ್ವಾಗತಿಸಿದರು.