ಚಿತ್ರದುರ್ಗ: ಸರಿಯಾದ ಲೆಕ್ಕಪತ್ರ, ಅರ್ಹ ಫಲಾನುಭವಿಗಳಿಗೆ ಸಾಲ ವಿತರಿಸುವ ಕುರಿತಂತೆ ನಿಗಾ ವಹಿಸುವುದು ಸಹಕಾರ ಸಂಘಗಳ ನಿರ್ದೇಶಕರ ಜವಾಬ್ದಾರಿ ಎಂದು ಹೊಳಲ್ಕೆರೆ ತಾಲೂಕು ಶಿವಗಂಗಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಎಸ್.ಆರ್. ಗಿರೀಶ್ ಹೇಳಿದರು.
ಬ್ರಹ್ಮಪುರ, ಪಂಪಾಪುರ, ನಗರಘಟ್ಟ, ಈಚಘಟ್ಟ, ಶಿವಗಂಗ, ಹಳೆಹಳ್ಳಿ ಗೊಲ್ಲರಹಟ್ಟಿ, ಗಿಲಿಕೇನಹಳ್ಳಿ ಗ್ರಾಮಗಳಿಗೆ ಬುಧವಾರ ಭೇಟಿ ನೀಡಿ ಈಚೆಗೆ ನಡೆದ ಶಿವಗಂಗಾ ಸೊಸೈಟಿ ನಿರ್ದೇಶಕರ ಸ್ಥಾನಗಳಿಗೆ ತಮ್ಮ ಗುಂಪಿನ ಸಹಕಾರಿಗಳನ್ನು ಆಯ್ಕೆ ಮಾಡಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು.
ಅರ್ಹ ರೈತರಿಗೆ ಸಾಲ ವಿತರಿಸುವ ಮೂಲಕ ಅವರ ಜೀವನ ಮಟ್ಟ ಸುಧಾರಣೆಗೆ ಒತ್ತು ಕೊಡಬೇಕು. ಸಾಲ ಪಡೆದವರು ಪ್ರಾಮಾಣಿಕವಾಗಿ ಮರು ಪಾವತಿ ಮಾಡಿದಾಗ ಸಹಕಾರ ಸಂಘಗಳು ಸುಸ್ಥಿತಿಯಲ್ಲಿರುತ್ತವೆ ಎಂದರು.
ಸಂಘದ ನೂತನ ನಿರ್ದೇಶಕರಾದ ಎಚ್. ಕುಬೇರಪ್ಪ, ಮೌನೇಶ್, ಯು.ಎಂ. ವೀರಭದ್ರಪ್ಪ, ವಿ. ಶಶಿಧರ, ಮಮತಾ, ಸುಜಾತಾ, ತಿಪ್ಪೇರುದ್ರಪ್ಪ, ಡಿ. ಮಹದೇವಪ್ಪ, ಮುಖಂಡರಾದ ಸಿ. ಮಹೇಶ್, ದಗ್ಗೆ ಶಿವಪ್ರಕಾಶ್, ಮಹಾರುದ್ರಪ್ಪ, ವಕೀಲ ರಂಗಸ್ವಾಮಿ, ಉಮೇಶ್ ಈಚಘಟ್ಟ, ಮಾಜಿ ನಿರ್ದೇಶಕಿ ಪುಷ್ಪಾ ಮತ್ತಿತರರು ಇದ್ದರು.