ಜಿಲ್ಲೆ

ಸಾಲ ಬಾಧೆಗೆ ರೈತ ನೇಣಿಗೆ ಶರಣು

ಅರಕಲಗೂಡು: ತಾಲೂಕಿನ ಕಂಠೇನಹಳ್ಳಿ ಗ್ರಾಮದಲ್ಲಿ ಸೋಮವಾರ ಸಾಲದ ಹೊರೆ ತಾಳಲಾರದೆ ರೈತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗ್ರಾಮದ ಕೆ.ಡಿ. ರವಿ (51) ಆತ್ಮಹತ್ಯೆಗೆ ಶರಣಾದ ರೈತ. ಈತ ಸಿದ್ದಾಪುರ ಕಾವೇರಿ ಗ್ರಾಮೀಣ ಬ್ಯಾಂಕ್‌ನಲ್ಲಿ 1.50 ಲಕ್ಷ ರೂ., ಧರ್ಮಸ್ಥಳ ಸಂಸ್ಥೆಯಲ್ಲಿ 1 ಲಕ್ಷ ರೂ., ಚೈತನ್ಯ ಸಂಘದಲ್ಲಿ 60 ಸಾವಿರ ರೂ., ಸಮಸ್ತ ಸಂಘದಲ್ಲಿ 70 ಸಾವಿರ ರೂ., ಅರಕಲಗೂಡು ಎಲ್.ಎನ್.ಟಿ. ಯಲ್ಲಿ 65 ಸಾವಿರ ರೂ. ಹಾಗೂ ಹಲವೆಡೆ ಸಾಲ ಮಾಡಿಕೊಂಡಿದ್ದರು.

1.10 ಎಕರೆ ಜಮೀನಿನಲ್ಲಿ ಜೋಳ, ಶುಂಠಿ ಬೆಳೆ ಬೆಳೆದಿದ್ದರು. ಶುಂಠಿಗೆ ಉತ್ತಮ ಬೆಲೆ ಬಾರದ ಕಾರಣ ಸಾಲಕ್ಕೆ ಹೆದರಿ ಸೋಮವಾರ ಬೆಳಗ್ಗೆ ಜಮೀನು ಬಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಈ ಕುರಿತು ಮೃತರ ಪತ್ನಿ ಕೌಸಲ್ಯಾ ಕೊಣನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ. ಮೃತರ ಮರಣೋತ್ತರ ಶವ ಪರೀಕ್ಷೆ ನಡೆದ ಕೊಣನೂರು ಸರ್ಕಾರಿ ಆಸ್ಪತ್ರೆಗೆ ತೆರಳಿ ತಹಸೀಲ್ದಾರ್ ಮಲ್ಲಿಕಾರ್ಜುನ, ಸಬ್‌ಇನ್‌ಸ್ಪೆಕ್ಟರ್ ಗಿರೀಶ್ ಭೇಟಿ ನೀಡಿದ್ದರು.