ಜಿಲ್ಲೆ

ಸಾಲ ಬಾಧೆ ತಾಳದೆ ರೈತ ಆತ್ಮಹತ್ಯೆ

ಚಿತ್ರದುರ್ಗ: ಸಾಲಬಾಧೆ ತಾಳದೆ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಚಿತ್ರದುರ್ಗ ತಾಲೂಕು ಕ್ಯಾದಿಗೆರೆ ಗ್ರಾ ಮದಲ್ಲಿ ಶವಾರ ನಡೆದಿದೆ.
ಮೃತನನ್ನು ಗ್ರಾಮದ ವಿಶ್ವನಾಥ್(54) ಎಂದು ಗುರುತಿಸಲಾಗಿದೆ. ಏಳು ಎಕರೆ ಜಮೀನಲ್ಲಿ 2 ಎಕರೆ ಈರುಳ್ಳಿ, 2 ಎಕರೆ ಸೇವಂತಿಗೆ, 3 ಎಕರೆಯಲ್ಲಿದ್ದ ಮೆಕ್ಕೆಜೋಳ ಮತ್ತಿತರ ಬೆಳೆ ಮಳೆಯಿಂದ ಹಾಳಾಗಿತ್ತು. ಡಿಎಸ್‌ಹಳ್ಳಿ ಕರ್ನಾಟಕ ಗ್ರಾಮೀಣ ಬ್ಯಾಂಕ್ 1.20 ಲಕ್ಷ ರೂ. ಸಾಲ, ಕೈಗಡ 6 ಲಕ್ಷ ರೂ. ಸಾಲ ಮಾಡಿದ್ದ ಈತ, ಬೆಳೆ ನಾಶದಿಂದ ಕಂಗೆಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗ್ರಾಮಾಂತರ ಠಾಣೆ ಪಿಐ ಮುದ್ದುರಾಜ್ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.