ಜಿಲ್ಲೆ

ಸಾರ್ವಜನಿರ ಉಪಯೋಗಕ್ಕೆ ಬರುವಂತಹ ಎಲ್ಲ ಸ್ಥಳ ಸ್ವಚ್ಛಗೊಳಿಸಬೇಕು: ಶಿವು

reportermys

ಬೇಲೂರು: ಸೂಕ್ತ ನಿರ್ವಹಣೆ ಇಲ್ಲದೆ ಪಾಚಿ ಕಟ್ಟಿದ್ದ ಕುಡಿಯುವ ನೀರಿನ ಸಿಸ್ಟನ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಿದ್ದಲ್ಲದೆ, ಸುತ್ತಲು ಬೆಳೆದಿದ್ದ ಗಿಡಗಂಟೆಗಳನ್ನು ತಾಲೂಕಿನ ಮುರೇಹಳ್ಳಿ ಗ್ರಾಮದಲ್ಲಿ ಭೀಮ್ ಆರ್ಮಿ ತಂಡ ತೆರವುಗೊಳಿಸಿ ಸಿಸ್ಟನ್‌ಗಳಿಗೆ ಬಣ್ಣ ಬಳಿಯುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿದ್ದಾರೆ.


ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಮುರೇಹಳ್ಳಿ ಗ್ರಾಮದಲ್ಲಿರುವ ಕುಡಿಯುವ ನೀರಿನ ಸಿಸ್ಟನ್‌ಗಳನ್ನು ಗ್ರಾಮ ಪಂಚಾಯಿತಿಯಿಂದ ಸ್ವಚ್ಛಗೊಳಿಸದ ಕಾರಣ ಒಳ ಹಾಗೂ ಹೊರ ಭಾಗದಲ್ಲಿ ಪಾಚಿ ಕಟ್ಟಿ ನೀರು ಕುಡಿಯದಂತ್ತಾಗಿತ್ತು. ಇದನ್ನು ಅರಿತ ಮುರೇಹಳ್ಳಿ ಭೀಮ್ ಆರ್ಮಿ ತಂಡದ ಸದಸ್ಯರು ಸಿಸ್ಟನ್‌ಗಳ ಸುತ್ತಲು ಬೆಳೆದಿದ್ದ ಗಿಡಗಂಟೆಗಳನ್ನು, ಮತ್ತು ಪಾಚಿಯನ್ನು ಸಂಪೂರ್ಣ ಸ್ವಚ್ಚಗೊಳಿಸಿ ತಮ್ಮ ಸ್ವಂತ ಹಣದಲ್ಲಿ ಬಣ್ಣ ಬಳಿದು ಟ್ಯಾಂಕ್‌ಗಳು ಸಾರ್ವಜನಿಕರ ಉಪಯೋಗಕ್ಕೆ ಬರುವಂತೆ ಮಾಡುವ ಮೂಲಕ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.


ಮುರೇಹಳ್ಳಿ ಗ್ರಾಮದ ಭೀಮ್ ಆರ್ಮಿ ತಂಡದ ಅಧ್ಯಕ್ಷ ಶಿವು ಮಾತನಾಡಿ, ಸಾರ್ವಜನಿರ ಉಪಯೋಗಕ್ಕೆ ಬರುವಂತಹ ಎಲ್ಲ ಸ್ಥಳಗಳನ್ನು ಗ್ರಾಮ ಪಂಚಾಯಿತಿಯಿಂದ ಸ್ವಚ್ಛಗೊಳಿಸಬೇಕು. ಆದರೆ ನಮ್ಮ ಗ್ರಾಮದಲ್ಲಿ ತುಂಬಾ ದಿನಗಳಿಂದ ಸಿಸ್ಟನ್ ಸ್ವಚ್ಛಗೊಳಿಸದ ಕಾರಣ ಪಾಚಿ ಕಟ್ಟಿದ್ದಲ್ಲದೆ, ಗಿಂಡ ಗಂಟೆಗಳು ಬೆಳೆದು ಅಶುಚಿತ್ವಕ್ಕೆ ಕಾರಣವಾಗಿತ್ತು. ಅಲ್ಲದೆ ಗ್ರಾಮಸ್ಥರು ಕುಡಿಯುವ ನೀರಿಗೆ ಪರದಾಡುವಂತ್ತಾಗಿತ್ತು. ಇದನ್ನು ಅರಿತು ನಮ್ಮ ತಂಡದ ಸದಸ್ಯರೆ ಸೇರಿ ಸ್ವಚ್ಛಗೊಳಿಸಿ, ಬಣ್ಣ ಸಹ ಬಳಿದು ಗ್ರಾಮಸ್ಥಇಗೆ ಅನುಕೂಲವಾಗುವಂತೆ ಮಾಡಿದ್ದೇವೆ. ಅಲ್ಲದೆ ಗ್ರಾಮಸ್ಥರು ಸಹ ಸ್ವಚ್ಚತೆಗೆ ಹೆಚ್ಚು ಆದ್ಯತೆ ನೀಡಿ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿರಿಸಿಕೊಳ್ಳಬೇಕು. ಪರಿಸರ ಸ್ವಚ್ಚವಾಗಿದ್ದರೆ ನಾವು ಆರೋಗ್ಯವಾಗಿರುತ್ತೇವೆ. ಆದ್ದರಿಂದ ಸಂಬಂಧಿಸಿದ ಗ್ರಾ.ಪಂ ಅಕಾರಿಗಳು ಹಾಗೂ ಜನ ಪ್ರತಿನಿಗಳು ಗ್ರಾಮಗಳ ಸ್ವಚ್ಚತೆ ಕಡೆಗೆ ಗಮನ ಹರಿಸಬೇಕು ಎಂದರು.


ಬೀಮ್ ಆರ್ಮಿ ತಂಡದ ರವಿ, ಅಮೃತ್, ಪ್ರಕಾಶ್, ರಾಜು ಸೇರಿದಂತೆ ಗ್ರಾಮಸ್ಥರಿದ್ದರು.