ಸಿರಗುಪ್ಪ: ಜನೌಷಧ ಕೇಂದ್ರಗಳನ್ನು ಮುಚ್ಚುವ ರಾಜ್ಯ ಸರ್ಕಾರದ ನಿರ್ಧಾರ ಖಂಡನೀಯ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಎಂ.ಎಸ್.ಸಿದ್ದಪ್ಪ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿರುವ ಜನೌಷಧ ಕೇಂದ್ರದ ಮುಂದೆ ಬಿಜೆಪಿ ಮಂಡಲ ಘಟಕದಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಶುಕ್ರವಾರ ಮಾತನಾಡಿದರು. ಬಡವರಿಗೆ ಉಪಯೋಗವಾಗುವ ಯೋಜನೆಗಳನ್ನು ಕಾಂಗ್ರೆಸ್ ಎಂದಿಗೂ ಸಹಿಸುವುದಿಲ್ಲ. ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಪ್ರಧಾನ ಮಂತ್ರಿ ಭಾರತೀಯ ಜನೌಷಧ ಕೇಂದ್ರಗಳನ್ನು ಮುಚ್ಚುವಂತೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಹಿಂಪಡೆಯಬೇಕು. ಅತ್ಯಂತ ಕಡಿಮೆ ಬೆಲೆಗೆ ಔಷಧ ಸಿಗಲಿ ಎಂದು ಪ್ರಧಾನಿ ಜನೌಷಧ ಕೇಂದ್ರಗಳನ್ನು ಆರಂಭಿಸಿದ್ದಾರೆ. ಇದರಿಂದ ಜನರಿಗೆ ಹಣ ಉಳಿತಾಯವಾಗಲಿದೆ ಎಂದು ತಿಳಿಸಿದರು.
ಮಂಡಲ ಅಧ್ಯಕ್ಷ ಕೆ.ಮಲ್ಲಿಕಾರ್ಜುನ ಸ್ವಾಮಿ, ಪ್ರಮುಖರಾದ ಎಂ.ಆರ್.ಗೌಡ, ವೀರನಗೌಡ, ಮೇಕಲ್ ವೀರೇಶ, ದರಪ್ಪ ನಾಯಕ, ಮೋಹನ್ ರೆಡ್ಡಿ, ನಟರಾಜ, ವೈ.ಡಿ.ವೆಂಕಟೇಶ, ರಾಮಕೃಷ್ಣ, ಖಾಜಾಸಾಬ್, ಮಂಡರಿಗೆ ಕೃಷ್ಣ, ದೇವ, ಮಲ್ಲಿಕಾರ್ಜುನ, ಬಸವರಾಜ, ಅಲಿಪೀರ್, ಮುದಿಯಪ್ಪ, ಈರಣ್ಣ, ಶಂಕರ, ಶ್ರೀನಿವಾಸ, ನಾಗರಾಜ, ಸರ್ದಾರ ಇತರರಿದ್ದರು.