ಜಿಲ್ಲೆ

ಸಾರ್ವಜನಿಕರಿಗೆ ತೊಂದರೆಯಾದರೆ ಕಮಿಟಿ ಮೇಲೆ ಕ್ರಮ

ಬೆನಕಟ್ಟಿ: ಗೌರಿ&ಗಣೇಶ ಹಬ್ಬದ ಪ್ರಯುಕ್ತ ಮುರಗೋಡ ಪೊಲೀಸ್​ ಠಾಣೆ ವ್ಯಾಪ್ತಿಯ ಬೆನಕಟ್ಟಿ ಗ್ರಾಮದಲ್ಲಿ ಈಚೆಗೆ ಶಾಂತಿ ಸಭೆ ಜರುಗಿತು. ಸಬ್​ ಇನ್​ಸ್ಪೆಕ್ಟರ್​ ಎಲ್​.ಬಿ.ಮಾಳಿ ಮಾತನಾಡಿ, ಗೌರಿ&ಗಣೇಶ ಹಬ್ಬದಲ್ಲಿ ಯಾವುದೇ ಅಹಿತಕರ ಟನೆಗೆ ಅವಕಾಶ ನೀಡಬಾರದು ಹಾಗೂ ಸಮಾಜಘಾತುಕ ಕೆಲಸ ಮಾಡಬಾರದು. ಡಿಜಿ ಸೌಂಡ್​ ಸಂಪೂರ್ಣ ನಿಷೇಧಿಸಲಾಗಿದೆ, ಪರವಾನಗಿ ಇಲ್ಲದೆ ಸಾರ್ವಜನಿಕರಿಗೆ ತೊಂದರೆಯಾದರೆ ಕಮಿಟಿಯವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಗ್ರಾಮದ ಬೀಟ್​ ಪೊಲೀಸ್​ ಎಸ್​.ಎಂ.ರಾಯನಾಯ್ಕರ ಮಾತನಾಡಿ, ಬೈಕ್​ ಮಾಲೀಕರು ತಮ್ಮ ವಾಹನಗಳಿಗೆ ಲೈಸೆನ್ಸ್​ ಹಾಗೂ ವಿಮೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಎಫ್​.ವೈ.ದಾಸಪ್ಪನ್ನವರ, ಬೀರಪ್ಪ ಕುರಿ, ಪ್ರಕಾಶ ಸಾವಳಗಿ, ಮಹಾದೇವ ಜಕಬಾಳ, ಗದಿಗೆಪ್ಪ ವೀರಶೆಟ್ಟಿ, ಪಂಚಪ್ಪ ಮಾತಾರಿ, ಈರಯ್ಯ ಹಿರೇಮಠ, ಪ್ರಕಾಶ ಕಲ್ಲೇದ, ಅಶೋಕ ಯರಝರ್ವಿ, ಸುರೇಶ ಸಾವಳಗಿ, ರುದ್ರಪ್ಪ ವೀರಶೆಟ್ಟಿ, ರಮೇಶ ಕುರಿ, ಈರಣ್ಣ ಚಿನ್ನಪ್ಪನ್ನವರ, ರುದ್ರಪ್ಪ ಶಿರೋಳ, ಮರೆಪ್ಪ ಸಾವಳಗಿ, ಕೃಷ್ಣ ಹಣಮಂತಿ, ರುದ್ರಪ್ಪ ಲಕ್ಕಪ್ಪನ್ನವರ ಇತರರು ಇದ್ದರು.