ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕಿನ ಅಂಬಳೆ ಹೋಬಳಿಯ ಹದ್ದಿಗಿಡದ ೧೨ ಗುಂಟೆ ರಸ್ತೆ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಲಾಗಿದ್ದು. ಚಿಕ್ಕಮಗಳೂರು ತಹಸೀಲ್ದಾರ್ ಆದೇಶದ ಮೇರೆಗೆ ಸರ್ಕಾರಿ ರಸ್ತೆಯನ್ನು ಸರ್ವೆ ಮಾಡಿ ತೆರವುಗೊಳಿಸಲು ಅಧಿಕೃತ ಆದೇಶ ನೀಡಲಾಗಿದೆ.
ಅನೇಕ ವರ್ಷಗಳಿಂದ ಸಾರ್ವಜನಿಕರು ಒಡಾಡಲು ಬಳಸುತ್ತಿದ್ದ ರಸ್ತೆ ಇದಾಗಿದ್ದು, ಈ ರಸ್ತೆ ಕದ್ರಿಮಿದ್ರಿಯಿಂದ ಬಿಕ್ಕೆಮನೆ ಹೋಗುವ ದಾರಿ ಮದ್ಯೆ ಒತ್ತುವರಿಯಾಗಿರುವ ೧೨ ಗುಂಟೆ ಜಾಗ ವನ್ನು ಸರ್ವೆ ನೆಡೆಸಿ ತೆರವು ಗೊಳಿಸಲು ಮಳಲೂರು ಗ್ರಾಮ ಲೆಕ್ಕಾಧಿಕಾರಿ ಸುನೀತಾ ಹಾಗೂ ಆರ್‌ಐ ಅವರಿಗೆ ತಹಸೀಲ್ದಾರ್ ಸೂಚನೆ ನೀಡಿದ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿ ಅಳತೆ ಕಾರ್ಯ ಪೂರ್ಣಗೊಳಿಸಿದರು.
ಪ್ರಸ್ತುತ ಒತ್ತುವರಿದಾರರಿಗೆ ಸಮಯಾವಕಾಶವನ್ನು ನೀಡಲಾಗಿದ್ದು, ಸದ್ಯದಲ್ಲೇ ಒತ್ತುವರಿ ಖುಲ್ಲಾಗೊಳಿ ಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯರಾದ ಶಿವಶಾಂತ ಆರಾಧ್ಯ, ಸತೀಶ್, ಪ್ರಕಾಶ್, ಪಾಪಣ್ಣ, ಬಸವರಾಜ್, ಶಿವಕುಮಾರ್, ಕಲ್ಲೇಶ್, ರಾಜು, ಮಹೇಶ್, ಅಶೋಕ್, ಪಂಚಾಕ್ಷರಿ ಮತ್ತಿತರರಿದ್ದರು.