ಸಾರ್ವಜನಿಕ ಸ್ಥಳದಲ್ಲಿ ತಲವಾರ ಪ್ರದರ್ಶನ
ಇಬ್ಬರು ಯುವಕರು ಪೊಲೀಸ್ ವಶಕ್ಕೆ
ಬೆಳಗಾವಿ: ಸಾರ್ವಜನಿಕ ಸ್ಥಳದಲ್ಲಿ ತಲವಾರ ಹಿಡಿದು ಸಾರ್ವಜನಿಕರಲ್ಲಿ ಭಯ ಹುಟ್ಟುವಂತೆ ವರ್ತಿಸಿದ್ದ ಇಬ್ಬರು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಹುಕ್ಕೇರಿ ತಾಲೂಕಿನ ಶಹಾಬಂದರ ಗ್ರಾಮದ ಬಳಿ ನಡೆದಿದೆ.
ಬೆಳಗಾವಿ ತಾಲೂಕಿನ ಬಮ್ಮನಟ್ಟಿ ಗ್ರಾಮದ ನಿವಾಸಿ ಹಾಲಪ್ಪ ದ್ಯಾಮಪ್ಪ ಕಾಟಾಬಳಿ(೨೫) ,ಹುಕ್ಕೇರಿ ತಾಲೂಕಿನ ಚಿಕಲದಿನ್ನಿ ಗ್ರಾಮದ ನಿವಾಸಿ ನಾಗರಾಜ ದ್ಯಾಮಪ್ಪ ಕಟಾಬಳಿ(೨೧) ಬಂಧಿತ ಅರೋಪಿಗಳು.ಈಚೆಗೆ ಇವರು ಶಹಬಂದರ ಕ್ರಾಸ್ ಬಳಿಯ ವಾಲ್ಮೀಕಿ ಸರ್ಕಲ್ ಬಳಿ ಕೈಯಲ್ಲಿ ತಲವಾರ ಹಿಡಿದು ಅಲ್ಲಿ ಓಡಾಡುವ ಜನರಿಗೆ ನಿಂದಿಸಿ ,ಭಯದ ವಾತಾವರಣ ನಿರ್ಮಾಣ ಮಾಡಿದ್ದರು.
ವಿಷಯ ತಿಳಿದ ಯಮಕನಮರಡಿ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.ಈ ಕುರಿತು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.