ರಾಯಚೂರಿನಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಹೊಗೆ ಕಾಣಿಸಿಕೊಂಡಿದ್ದರಿಂದ ಚಾಲಕ ಕೊಡದಲ್ಲಿ ರೇಡಿಯೇಟರ್‌ಗೆ ನೀರು ಸುರಿಯುತ್ತಿರುವುದು. 
ಜಿಲ್ಲೆ

ಸಾರಿಗೆ ಬಸ್‌ನಲ್ಲಿ ಕಾಣಿಸಿಕೊಂಡ ಹೊಗೆ

ರಾಯಚೂರು
ಸಾರಿಗೆ ಸಂಸ್ಥೆ ಬಸ್‌ನಲ್ಲಿ ಏಕಾಏಕಿಯಾಗಿ ಹೊಗೆ ಆವರಿಸಿಕೊಂಡು ಪ್ರಯಾಣಿಕರು ಆತಂಕಕ್ಕೆ ಒಳಗಾದ ಘಟನೆ ಮಂತ್ರಾಲಯ ಹತ್ತಿರದ ಮಾಧವರಂ ಹತ್ತಿರ ಶನಿವಾರ ಜರುಗಿದೆ.
ನಗರದಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದ ಬಸ್‌ನ ಇಂಜಿನ್ ಹೀಟ್ ಆಗಿ ರೇಡಿಯೇಟರ್‌ನಿಂದ ಹೊಗೆ ಬಂದು ಬಸ್ ತುಂಬಾ ಆವರಿಸಿದೆ. ಬಸ್‌ನಲ್ಲಿ ದಟ್ಟವಾಗಿ ಹೊಗೆ ಹರಡುತ್ತಿದ್ದನ್ನು ಕಂಡು ಪ್ರಯಾಣಿಕರು ಭಯಭೀತರಾಗಿದ್ದು, ಚಾಲಕ ಬಸ್ ನಿಲ್ಲಿಸಿ ಕೊಡದಲ್ಲಿ ನೀರು ತಂದು ರೇಡಿಯೇಟರ್‌ಗೆ ಸುರಿದು ಹೊಗೆ ಬರದಂತೆ ಪ್ರಯತ್ನ ಪಟ್ಟಿದ್ದಾನೆ.
ಮಂತ್ರಾಲಯದಲ್ಲಿ ರಾಯರ ಆರಾಧನೆ ನಿಮಿತ್ತ ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ನಲ್ಲಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಬಸ್ ಕೆಟ್ಟು ನಿಂತಿದ್ದರಿಂದ ಪ್ರಯಾಣಿಕರು ಹಳೆಯದಾದ ಬಸ್ ಓಡಿಸುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.