ಇಟಗಿ ಗ್ರಾಮದಲ್ಲಿ ಶ್ರೀ ಸಾಯಿನಾಥ ಮಂದಿರದ ಲೋಕಾರ್ಪಣೆ ನಿಮಿತ್ತ ಹಮ್ಮಿಕೊಂಡಿದ್ದ ಧರ್ಮ ಸಭೆಯನ್ನು ಗಣ್ಯರು ಉದ್ಘಾಟಿಸಿದರು. ಗುರುಸಿದ್ದಯ್ಯ ಕಲ್ಮಠ ಸ್ವಾಮೀಜಿ, ಅಡವಿಸಿದ್ದೇಶ್ವರ ಸ್ವಾಮೀಜಿ, ಚೆನ್ನಬಸವ ದೇವರು, ವಿಠ್ಠಲ ಹಲಗೇಕರ, ಇತರರಿದ್ದರು. 
ಜಿಲ್ಲೆ

ಸಾಯಿಬಾಬಾ ತತ್ತ್ವಾದರ್ಶ ಅಳವಡಿಸಿಕೊಳ್ಳಲಿ

ಇಟಗಿ: ಭಾವೈಕ್ಯತೆಯ ಸಂದೇಶವನ್ನು ಜಗತ್ತಿಗೆ ಸಾರಿದ ಶಿರಡಿ ಸಾಯಿಬಾಬಾ ಅವರ ತತ್ತ್ವಾದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಶ್ರೀ ಮಹಾಲಕ್ಷೀ
ಗ್ರೂಪ್‌ನ ಅಧ್ಯಕ್ಷ ವಿಠ್ಠಲ ಹಲಗೇಕರ ಹೇಳಿದರು.

ಇಲ್ಲಿನ ಸಾಯಿನಾಥ ಮಂದಿರದ ಲೋಕಾರ್ಪಣೆ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಧರ್ಮ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಪಾರಿಶ್ವಾಡದ ಗುರುಸಿದ್ದಯ್ಯ ಕಲ್ಮಠ ಸ್ವಾಮೀಜಿ ಅವರು, 5 ದಿನಗಳ ಕಾಲ ಜರುಗುವ ಶ್ರೀ ಸಾಯಿಬಾಬಾ ಅವರ ಜೀವನ ಚರಿತಾಮೃತ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಿಡಕಲ್‌ನ ಪ್ರಭು ಅಡವಿಸಿದ್ದೇಶ್ವರ ಸ್ವಾಮೀಜಿ, ಅವರೊಳ್ಳಿ-ಬೀಳಕಿಯ ಚೆನ್ನಬಸವ ದೇವರು, ಚಿಕ್ಕಮುನವಳ್ಳಿಯ ಶಿವಪುತ್ರ ಸ್ವಾಮೀಜಿ, ಗದ್ದಿಕರವಿನಕೊಪ್ಪದ ಚಿದಾನಂದ ಅವಧೂತರು, ಯರಜರಿ ಶ್ರೀಗಳು ಮಾತನಾಡಿದರು. ಬಿಜೆಪಿ ಮುಖಂಡ ಬಸವರಾಜ ಸಾಣಿಕೊಪ್ಪ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಮೋದ ಕೋಚೇರಿ, ಹನಿವೆಲ್ ಇಂಟರ್‌ನ್ಯಾಶನಲ್ ಸ್ಕೂಲ್ ಅಧ್ಯಕ್ಷ ಸುಭಾಷ ಗುಳಶೆಟ್ಟಿ, ಪ್ರವಾಸೋದ್ಯಮ ನಿರ್ದೇಶಕ ಶ್ರೀಕಾಂತ ಇಟಗಿ, ಬಿಜೆಪಿ ಮುಖಂಡರಾದ ಜ್ಯೋತಿಬಾ ರೇಮಾಣಿ, ಸುಂದರ ಕುಲಕರ್ಣಿ, ಸಂತೋಷ ಕಿಳೋಜಿ, ಆಕಾಶ ಅಥಣಿಕರ, ಅಭಿಜಿತ ಶಾಂಡಿಲ್ಕರ್, ಬಿಷ್ಠಪ್ಪ ಬನೋಶಿ ಇತರರು ಇದ್ದರು.