ಜಿಲ್ಲೆ

ಸಾಯಿ ಸ್ಫೂರ್ತಿ ಕಾಲೇಜು ಸಾಧನೆ

Bidar

ಬೀದರ್: ಸ್ವಾತಂತ್ರ್ಯೋತ್ಸವ ಪ್ರಯುಕ್ತ ವಾಣಿಜ್ಯ ತೆರಿಗೆ ಇಲಾಖೆ ಆಯೋಜಿಸಿದ್ದ ವಾಣಿಜ್ಯ ತೆರಿಗೆ ಕುರಿತ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ನಗರದ ಸಾಯಿ ಸ್ಫೂರ್ತಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಸಾಧನೆ ಮೆರೆದಿದ್ದಾರೆ.

ಕಾಲೇಜಿನ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಒಟ್ಟು ಆರು ಬಹುಮಾನಗಳ ಪೈಕಿ ನಾಲ್ಕು ಬಹುಮಾನಗಳನ್ನು ಬಾಚಿಕೊಂಡು ಗಮನ ಸೆಳೆದಿದ್ದಾರೆ. ಚಿತ್ರಕಲೆಯಲ್ಲಿ ನಾಗೇಶ ಅನಿಲಕುಮಾರ ಪ್ರಥಮ, ಅಂಬರೀಷ್ ಘಾಳೆಪ್ಪ ದ್ವಿತೀಯ, ಬಿರಾದಾರ ಪೂಜಾ ತೃತೀಯ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ಸಂದೀಪ್ ರವಿಕುಮಾರ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.

ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ನಿರ್ದೇಶಕ ಎಸ್.ಎ. ನಾರಾಯಣರಾವ್ ಅವರು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ವಾಣಿಜ್ಯ ಅಧಿಕಾರಿ ಡಾ. ಮಹೇಶ ಮಾಶೆಟ್ಟಿ, ಸಾಯಿ ಸ್ಫೂರ್ತಿ ಕಾಲೇಜು ಪ್ರಾಚಾರ್ಯ ಚಂದ್ರಶೇಖರ ಬಿರಾದಾರ, ವಾಣಿಜ್ಯ ತೆರಿಗೆ ಇಲಾಖೆ ಸಿಬ್ಬಂದಿ ಇದ್ದರು.