ಜಿಲ್ಲೆ

ಸಾಮೂಹಿಕ ಸ್ವಚ್ಛತಾ ಅಭಿಯಾನ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಅವಳಿ ನಗರದ ವಿವಿಧೆಡೆ ಶುಕ್ರವಾರ ಸಾಮೂಹಿಕ ಸ್ವಚ್ಛತಾ ಅಭಿಯಾನ ನಡೆಸಲಾಯಿತು.

ಪಾಲಿಕೆ ವ್ಯಾಪ್ತಿಯ 12 ವಲಯ ಕಚೇರಿಗಳಲ್ಲಿ ಒಂದು ವಾರ್ಡ್​ನ್ನು ಆಯ್ಕೆ ಮಾಡಿಕೊಂಡು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಸ್ವಚ್ಛತಾ ಅಭಿಯಾನ ನಡೆಸಲಾಯಿತು.

ಹುಬ್ಬಳ್ಳಿ ಮೇದಾರ ಓಣಿ, ಅಮರಗೋಳ, ಉಣಕಲ್ ಟಿಂಬರ್ ಯಾರ್ಡ್, ಆರ್.ಎನ್. ಶೆಟ್ಟಿ ರಸ್ತೆ, ನ್ಯೂ ಕಾಟನ್ ಮಾರ್ಕೆಟ್ ಸಾಂಸ್ಕೃತಿಕ ಭವನ ಸುತ್ತಮುತ್ತ, ಗವಿ ಓಣಿ, ಧಾರವಾಡದ ಎತ್ತಿನಗುಡ್ಡ, ಸೈದಾಪುರ ಶ್ರೀ ಕಲ್ಮೇಶ್ವರ ದೇವಸ್ಥಾನ ಸುತ್ತಮುತ್ತ, ಲೈನ್ ಬಜಾರ್, ಮಿಷನ್ ಕಂಪೌಂಡ್ ಇತ್ಯಾದಿ ಕಡೆ ಪೌರ ಕಾರ್ವಿುಕರು ಚರಂಡಿ, ನಾಲಾ ಹಾಗೂ ರಸ್ತೆ ಸ್ವಚ್ಛತೆ ಕೈಗೊಂಡರು.

ಪಾಲಿಕೆ ಸದಸ್ಯರು, ಆಯಾ ವಲಯ ಕಚೇರಿ ಸಹಾಯಕ ಆಯುಕ್ತರು, ಹಿರಿಯ-ಕಿರಿಯ ಆರೋಗ್ಯ ನಿರೀಕ್ಷಕರು ಪಾಲ್ಗೊಂಡಿದ್ದರು. ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಸ್ವಚ್ಛತಾ ಅಭಿಯಾನ ನಡೆಸಲಾಗುವುದು ಎಂದು ಪಾಲಿಕೆ ತಿಳಿಸಿದೆ.