ಕಡೂರು ಶ್ರೀ ದುರ್ಗಾ ಸೇವಾ ಸಮಿತಿಯ ಆಸ್ಥಾನ ಮಂಟಪದಲ್ಲಿ ಏರ್ಪಡಿಸಿದ್ದ ಸಾಮೂಹಿಕ ಸಹಸ್ರ ಕುಂಕುರ್ಮಾಚನೆಯಲ್ಲಿ ಮಹಿಳೆಯರು ಪೂಜೆ ನೆರವೇರಿಸಿದರು. 
ಜಿಲ್ಲೆ

ಸಾಮೂಹಿಕ ಸಹಸ್ರಕುಂಕುಮಾರ್ಚನೆ

ಕಡೂರು: ಪಟ್ಟಣದ ಛತ್ರದ ಬೀದಿಯಲ್ಲಿ ಶ್ರೀ ದುರ್ಗಾ ಸೇವಾ ಸಮಿತಿ ಪ್ರತಿಷ್ಠಾಪಿಸಿರುವ ಶ್ರೀ ದುರ್ಗಾದೇವಿ ಆಸ್ಥಾನ ಮಂಟಪದಲ್ಲಿ ಶುಕ್ರವಾರ ಸಂಜೆ ಸಾಮೂಹಿಕ ಸಹಸ್ರಕುಂಕುಮಾರ್ಚನೆ ಪೂಜೆ ಮಹಿಳೆಯರಿಂದ ಶಾಸ್ತ್ರೋಕ್ತವಾಗಿ ನೆರವೇರಿತು.

ನವರಾತ್ರಿಯ 5ನೇ ದಿನದ ಪೂಜಾ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಕುಂಕುರ್ಮಾಚನೆ ಪೂಜಾ ಕಾರ್ಯಕ್ರಮದಲ್ಲಿ ನಿರೀಕ್ಷೆಗೂ ಮೀರಿ ಮಹಿಳೆಯರು ಭಾಗವಹಿಸಿದ್ದರು. ಮಹಿಳೆಯರಿಗೆ ಸ್ಥಳಾವಕಾಶ ಕಲ್ಪಿಸಿಕೊಟ್ಟು ಪೂಜಾ ಸಾಮಗ್ರಿಗಳನ್ನು ನೀಡಿದರು. ಆಗಮಿಕ ಪ್ರಶಾಂತ್ ಭಟ್ ಸಂಗಡಿಗರಿಂದ ಸಂಕಲ್ಪ ಪೂಜಾ ಕಾರ್ಯದೊಂದಿಗೆ ಆರಂಭಿಸಿ ಮಹಿಳೆಯರಿಂದಲೇ ಕುಂಕುಮಾರ್ಚನೆಯನ್ನು ದೇವಿಗೆ ಸಮರ್ಪಿಸಿದರು. ನಂತರ ಮಹಿಳೆಯರಿಗೆ ಮಡಿಲಕ್ಕಿ ನೀಡಿ ಗೌರವಿಸಲಾಯಿತು. ಬಳಿಕ ರಂಗಪೂಜೆ ನಡೆಸಲಾಯಿತು.

ಸಮಿತಿ ಅಧ್ಯಕ್ಷ ಕೆ.ಪಿ.ವೆಂಕಟೇಶ್ ಮಾತನಾಡಿ, ಸಮಿತಿಯಿಂದ ಪ್ರತಿ ವರ್ಷದಂತೆ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸೆ.28ರಂದು ಸಂಜೆ 7 ಗಂಟೆಗೆ ದೀಪೋತ್ಸವ ಹಮ್ಮಿಕೊಳ್ಳಲಾಗಿದೆ. ಮಹಿಳೆಯರು ಮನೆಯಿಂದಲೇ ದೀಪೋತ್ಸವಕ್ಕಾಗಿ ಪೂಜಾ ಸಾಮಗ್ರಿಗಳನ್ನು ತಂದು ದೇವಿಯ ಆಸ್ಥಾನ ಮಂಟಪದ ಬಳಿ ಪೂಜೆ ಸಲ್ಲಿಸಬಹುದಾಗಿದೆ. 30ರಂದು ಚಂಡಿಕಾಹೋಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ರೇಖಾ ಆನಂದ್, ಪುರಸಭಾ ಉಪಾಧ್ಯಕ್ಷೆ ಮಂಜುಳಾ ಚಂದ್ರು, ಸಮಿತಿಯ ಕೆ.ಪಿ.ಶ್ರೀನಿವಾಸ್, ಯತಿರಾಜ್, ಸೋಮೇಶ್ ಶಿವಮೊಗ್ಗೆ, ಎಚ್.ಆರ್.ದೇವರಾಜ್, ಕೆ.ಸಿ.ವಿಕಾಸ್, ಆಕಾಶ್, ಪಂಗ್ಲಿ ಮಂಜುನಾಥ್, ನಾಗೇಂದ್ರ ಅಗ್ನಿ, ಸಿದ್ದೇಶ್, ಕೆ.ಎಂ.ನೂತನ್, ರಂಗನಾಥ್, ಹುಲಿಕೆರೆ ಮಹೇಶ್, ನಲ್ಲೂರಿ ಸುರೇಶ್, ಚೇತನ್ ಗೌತಮ್, ಮನು, ದಿಲೀಪ್ ಇತರರಿದ್ದರು.