ಜಿಲ್ಲೆ

ಸಾಮೂಹಿಕ ಶನಿ ಪುರಾಣ ಸಂಪನ್ನ

ಚಿತ್ರದುರ್ಗ: ಶ್ರಾವಣ ಮಾಸದ ಅಂಗವಾಗಿ ಚಿತ್ರದುರ್ಗದ ಬುರುಜನಹಟ್ಟಿಯ ಏಕನಾಥೇಶ್ವರಿ ದೇವಿ ಪಾದಗುಡಿಯ ಸಮುದಾಯ ಭವನದಲ್ಲಿ ಸಾಮೂಹಿಕ ಶನಿ ಮಹಾತ್ಮೆ ಪುರಾಣ ನಡೆಯಿತು.

ಕಲಾವಿದರಾದ ಟಿ.ನಾಗೇಶಪ್ಪ, ಎನ್.ಪರಶುರಾಮ್, ಎಸ್.ಬಿ.ಗಣೇಶ್, ಟಿ.ಎನ್.ಕಾಂತರಾಜ್, ಸಿ.ಯೋಗೇಶ್, ಕೆ.ಆರ್.ಕೃಷ್ಣಮೂರ್ತಿ, ಎಸ್.ಬಿ.ರವಿಕುಮಾರ್, ಕೆ.ಪಿ.ಶಿವರಾಜ್, ರಮೇಶ, ಕಾಡೇಶ, ಎಸ್.ಕೆ.ಮಂಜುನಾಥ, ರವಿ, ರಾಮ, ಶ್ರೀನಿವಾಸ ಸ್ವಾಮಿಯ ಪುರಾಣ ಹಾಗೂ ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು.