ಜಿಲ್ಲೆ

ಸಾಮೂಹಿಕ ಪ್ರಾರ್ಥನೆ

ಕೊಳ್ಳೇಗಾಲ: ಕ್ರಿಸ್‌ಮಸ್ ಹಬ್ಬವನ್ನು ತಾಲೂಕಿನಾದ್ಯಂತ ಕ್ರೈಸ್ತರು ಸಂಭ್ರಮದಿಂದ ಆಚರಿಸಿದರು.

ಪಟ್ಟಣದ ಸಂತ ಫ್ರಾನ್ಸಿಸ್ ಚರ್ಚ್, ಬ್ರದರನ್ ಚರ್ಚ್, ಬೇಥಲ್ ಲೂಥರನ್ ಚರ್ಚ್, ಸವೆಂತ್ ಡೇ ಚರ್ಚ್, ಸಿದ್ದಯ್ಯನಪುರದ ಅರುಣೋದಯ ಚರ್ಚ್, ಸಿಎಸ್‌ಐ ಚರ್ಚ್‌ಗಳಲ್ಲಿ ಸಮುದಾಯದವರು ಪ್ರಾರ್ಥನೆ ಸಲ್ಲಿಸಿದರು. ಧರ್ಮ ಗುರುಗಳ ಹಬ್ಬದ ಸಂದೇಶ ನೀಡಿದರು.

ಎಲ್ಲ ಚರ್ಚ್‌ಗಳಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಪತ್ರದ ಮೂಲಕ ಶುಭಾಶಯ ಕಳುಹಿಸಿದ್ದರು. ಚರ್ಚ್‌ಗಳು. ಮನೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.