ಜಿಲ್ಲೆ

ಸಾಮೂಹಿಕ ಅಗ್ನಿಹೋತ್ರ

ಸುಭಾಸ ಹೆಗಡೆ ಧೂಪದಹೊಂಡ

ಕುಮಟಾ: ಇಲ್ಲಿನ ನೆಲ್ಲಿಕೇರಿಯಲ್ಲಿ ಪತಂಜಲಿ ಯೋಗ ಸಮಿತಿಯಿಂದ ಬಾಬಾ ರಾಮದೇವ್ ಅವರ ನಿರ್ದೇಶನದಂತೆ ಭಾನುವಾರ ಸಾಮೂಹಿಕ ಅಗ್ನಿಹೋತ್ರ ಕಾರ್ಯಕ್ರಮ ನಡೆಯಿತು.

ಮಹಾಮಾರಿ ಕರೋನಾ ನಿಮೂಲನೆ ಹಾಗೂ ಜನ ಜಾಗೃತಿಗಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೆಳಗ್ಗೆ 48 ಯೋಗಬಂಧುಗಳಿಂದ ಸೂರ್ಯ ನಮಸ್ಕಾರ ಜರುಗಿತು. ಬಳಿಕ ಸಮಿತಿಯ ತಾಲೂಕು ಪ್ರಭಾರಿ, ಯೋಗ ಶಿಕ್ಷಕ ದಿನೇಶ ರೇವಣಕರ ಅಧ್ಯಕ್ಷತೆಯಲ್ಲಿ ವೇ. ರಾಮು ಅಡಿ ಅಚಾರ್ಯತ್ವದಲ್ಲಿ ಸಾಮೂಹಿಕ ಅಗ್ನಿಹೋತ್ರ ನಡೆಯಿತು. ಸಮಿತಿಯ ಯೋಗೀಶ ಉಪಾಧ್ಯಾಯ, ಶಂಕರ್, ರಾಜು ನಾಯಕ, ಶಿವಾನಂದ ರಾಜೇಶ ಇದ್ದರು.