ಜಿಲ್ಲೆ

ಸಾಮಾನ್ಯ ವರ್ಗದ ವಾರ್ಡ್‌ಗಳ ಅಭಿವೃದ್ಧಿಗೆ ಆದ್ಯತೆ

ಕೊಳ್ಳೇಗಾಲ: ನನ್ನ 20 ವರ್ಷದ ರಾಜಕಾರಣದಲ್ಲಿ ಕ್ಷೇತ್ರದ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸುವ ಜತೆಗೆ ನೂರಾರು ಅಭಿವೃದ್ಧಿ ಕೆಲಸ ಮಾಡಿಕೊಂಡು ಬಂದಿದ್ದೇನೆ ಎಂದು ಹನೂರು ಶಾಸಕ ಆರ್.ನರೇಂದ್ರ ಹೇಳಿದರು.


ಹನೂರು ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಸುಂಡ್ರಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿವಿಧ ಇಲಾಖೆಯ ಯೋಜನೆಯಡಿ ಎಸ್ಸಿ-ಎಸ್ಟಿ ಜನಾಂಗದ ಕಾಲನಿಯಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಿಸಲಾಗಿದೆ.ಆದರೆ ಸಾಮಾನ್ಯ ವರ್ಗಕ್ಕೆ ಸೇರಿದ ಜನರು ವಾಸಿರುವ ಬೀದಿಗಳಲ್ಲಿ ಹೆಚ್ಚು ಅಭಿವೃದ್ಧಿ ಕೆಲಸವಾಗಿರಲಿಲ್ಲ. ಆದ್ದರಿಂದ ಈ ಬಾರಿ ಹಲವು ಹಳ್ಳಿಗಳ ಸಾಮಾನ್ಯ ವಾರ್ಡ್‌ಗಳ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. 10 ಕೋಟಿ ರೂ. ವೆಚ್ಚದಲ್ಲಿ ಚರಂಡಿ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತದೆ. ಪಾಳ್ಯ ಹೋಬಳಿಯಲ್ಲಿ 3.50 ಕೋಟಿ ವೆಚ್ಚದ ಅಭಿವೃದ್ಧಿ ಕೆಲಸಕ್ಕೆ ಭೂಮಿ ಪೂಜೆ ಮಾಡಿದ್ದೇನೆ ಎಂದು ವಿವರಿಸಿದರು.


ಚಿಕ್ಕಲ್ಲೂರಿನ ಗ್ರಾಪಂ ಮಾಜಿ ಅಧ್ಯಕ್ಷ ವೆಂಕಟನಾಗು ಮಾತನಾಡಿ, ದಿ.ರಾಜು ಗೌಡ ಅವರು ಹನೂರು ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿದ್ದರು. ಇದೀಗ ಅವರ ಹಾದಿಯಲ್ಲೇ ಶಾಸಕ ನರೇಂದ್ರ ಸಹ ಮುನ್ನಡೆಯುತ್ತಿದ್ದಾರೆ. ಆದ್ದರಿಂದ ಈ ಬಾರಿಯೂ ನರೇಂದ್ರ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿ ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಗ್ರಾಮಕ್ಕೆ ಮಾಡಿಸಿಕೊಳ್ಳೊಣ ಎಂದು ಹೇಳಿದರು.

19 ಗ್ರಾಮಗಳಲ್ಲಿ ಭೂಮಿ ಪೂಜೆ: ಸತ್ತೇಗಾಲ ಗ್ರಾಮದ ಅಗ್ರಹಾರದ ಬೀದಿಯ ರಸ್ತೆ ಮತ್ತು ಚರಂಡಿ ಕಾಮಗಾರಿಗೆ 30 ಲಕ್ಷ ರೂ., ಸತ್ತೇಗಾಲ ಗ್ರಾಮದ ಒಕ್ಕಲಿಗರ ಬೀದಿಯ ರಸ್ತೆ ಮತ್ತು ಚರಂಡಿಗೆ 20ಲಕ್ಷ ರೂ., ನರೀಪುರ ಗ್ರಾಮದ ಕುರುಬರ ಬೀದಿ ಬಡಾವಣೆಯ ರಸ್ತೆ ಮತ್ತು ಚರಂಡಿಗೆ 20 ಲಕ್ಷ ರೂ., ಗುಂಡೇಗಾಲ ಗ್ರಾಮದ ಕುರುಬರ ಬೀದಿಗೆ ರಸ್ತೆ ಮತ್ತು ಚರಂಡಿಗೆ 25 ಲಕ್ಷ ರೂ., ಪಾಳ್ಯದ ಉಪ್ಪಾರ ಬೀದಿಯ ರಸ್ತೆ ಮತ್ತು ಚರಂಡಿಗೆ 35 ಲಕ್ಷ ರೂ., ತೆಳ್ಳನೂರು ಗ್ರಾಮದ ಒಕ್ಕಲಿಗರ ಬಡಾವಣೆಯ ರಸ್ತೆ ಮತ್ತು ಚರಂಡಿ ಗೆ 35 ಲಕ್ಷ ರೂ., ಸುಂಡ್ರಹಳ್ಳಿ ಗ್ರಾಮದ ಒಕ್ಕಲಿಗರ ಬೀದಿ ರಸ್ತೆ ಮತ್ತು ಚರಂಡಿಗೆ 20 ಲಕ್ಷ ರೂ., ದೊಡ್ಡಿಂದುವಾಡಿ ಗ್ರಾಮದ ಪರಿಶಿಷ್ಟ ಕಾಲನಿಯ ರಸ್ತೆ ಮತ್ತು ಚರಂಡಿಗೆ 25 ಲಕ್ಷ ರೂ., ಮೇಗಲ ದೊಡ್ಡಿ ಗ್ರಾಮದ ರಸ್ತೆ ಮತ್ತು ಚರಂಡಿಗೆ 20 ಲಕ್ಷ ರೂ., ಪ್ರಕಾಶ್ ಪಾಳ್ಯ ಗ್ರಾಮದ ರಸ್ತೆ ಮತ್ತು ಚರಂಡಿಗೆ 35 ಲಕ್ಷ, ಸರಗೂರು ಗ್ರಾಮದ ಪರಿಶಿಷ್ಟರ ಕಾಲನಿ ರಸ್ತೆ ಮತ್ತು ಚರಂಡಿಗೆ 15 ಲಕ್ಷ, ಪ್ರಕಾಶ್ ಪಾಳ್ಯ ಗ್ರಾಮದ ಚರ್ಚ್ ಪಕ್ಕದ ರಸ್ತೆ ಮತ್ತು ಚರಂಡಿಗೆ 30 ಲಕ್ಷ, ಕೊತ್ತನೂರು ಗ್ರಾಮದ ಒಕ್ಕಲಿಗರ ಬೀದಿಯ ರಸ್ತೆ ಮತ್ತು ಚರಂಡಿಗೆ 20 ಲಕ್ಷ ರೂ., ರಾಚಪ್ಪಾಜಿ ನಗರದಲ್ಲಿ ಜಮೀನಿಗೆ ತೆರಳುವ ರಸ್ತೆ ಅಭಿವೃದ್ಧಿಗೆ 20 ಲಕ್ಷ ರೂ. ನೀಡಿದ್ದು, ವಿವಿಧ ಗ್ರಾಮಗಳಲ್ಲಿ ಒಟ್ಟು 3.50 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ದೊರೆಯಿತು.

ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಚೇತನ್ ದೊರೈರಾಜ್, ಚಿಕ್ಕಲ್ಲೂರು ಗ್ರಾಪಂ ಅಧ್ಯಕ್ಷ ಸಿದ್ದರಾಜು, ತೆಳ್ಳನೂರು ಗ್ರಾಪಂ ಅಧ್ಯಕ್ಷ ರಮೇಶ್, ಮುಖಂಡ ಮುಕುಂದ ವರ್ಮಾ, ಕೃಷ್ಣ, ,ಮಾದಣ್ಣ, ತಿಮ್ಮಯ್ಯ ಯಡಕೊರೆ ಮಹದೇವ, ಪಾಳ್ಯ ಕೃಷ್ಣ, ಕುನ್ನ ನಾಯಕ, ಜಗದೀಶ್ ನಾಯಕ, ಅರುಣ್ ಗೌಡ, ಕೆ.ಆರ್.ಐ.ಡಿ.ಎಲ್ ಎಇಇ ಚಿಕ್ಕಲಿಂಗಯ್ಯ, ಇಂಜಿನಿಯರ್ ಪುನೀತ್ ಮತ್ತಿತರಿದ್ದರು.