filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.6198413, 0.46210727);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 37; 
ಜಿಲ್ಲೆ

ಸಾಮಾಜಿಕ ನ್ಯಾಯದಡಿ ಆಯ್ಕೆ ಸ್ವಾಗತಾರ್ಹ

ಚಿತ್ರದುರ್ಗ: ವಿಧಾನ ಪರಿಷತ್‌ಗೆ ವಿರೋಧ ಪಕ್ಷದ ನಾಯಕರನ್ನಾಗಿ ಛಲವಾದಿ ನಾರಾಯಣಸ್ವಾಮಿ ಅವರನ್ನು ಸಾಮಾಜಿಕ ನ್ಯಾಯದಡಿ ಆಯ್ಕೆ ಮಾಡಿರುವುದು ಸ್ವಾಗತಾರ್ಹ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ ಹೇಳಿದರು.

ಎಸ್ಸಿ ಮೋರ್ಚಾದಿಂದ ಮಂಗಳವಾರ ಹಮ್ಮಿಕೊಂಡಿದ್ದ ಸಂಭ್ರಮಾಚರಣೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿದರು.

ದೇಶದೊಳಗೆ ಎಲ್ಲ ಸಮುದಾಯಗಳನ್ನು ಒಟ್ಟಾಗಿ ಕೊಂಡೊಯ್ಯುವ, ಎಲ್ಲರ ಹಿತ ಬಯಸುವ ಪಕ್ಷ ಬಿಜೆಪಿಯಾಗಿದೆ. ಇಲ್ಲಿ ಸಾಮಾನ್ಯ ಕಾರ್ಯಕರ್ತ ಕೂಡ ಪ್ರಧಾನಿಯಾಗಬಲ್ಲ ಎಂಬುದಕ್ಕೆ ನರೇಂದ್ರ ಮೋದಿ ಅವರೇ ಉತ್ತಮ ನಿದರ್ಶನ ಎಂದರು.

ಕಾರ್ಯಕರ್ತರ ಸೇವೆ, ಶ್ರಮ ಪರಿಗಣಿಸಿ, ಅವರಿಗೆ ನಾಯಕತ್ವ ನೀಡುವ ಮೂಲಕ ಬೆಳೆಸುವಲ್ಲೂ ಪಕ್ಷದ ವರಿಷ್ಠರು ಹಿಂದೆ ಬಿದ್ದಿಲ್ಲ. ಹೀಗಾಗಿ ಅತಿ ಹೆಚ್ಚು ಕಾರ್ಯಕರ್ತರ ಪಡೆಯನ್ನು ಹೊಂದಿದೆ. ನಾರಾಯಣಸ್ವಾಮಿ ಅವರ ಆಯ್ಕೆ ಅತ್ಯಂತ ಉತ್ತಮ ನಿರ್ಧಾರ ಎಂದು ಹೇಳಿದರು.

ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ಪದಾಧಿಕಾರಿಗಳಾದ ನವೀನ್ ಚಾಲುಕ್ಯ, ಸಂಪತ್‌ಕುಮಾರ್, ನಾಗರಾಜ್ ಬೇಂದ್ರೆ, ದಗ್ಗೆ ಶಿವಪ್ರಕಾಶ್, ಛಲವಾದಿ ತಿಪ್ಪೇಸ್ವಾಮಿ, ಅರುಣ್, ಕವಿತಾ, ಭಾರತೀ, ಬಸಮ್ಮ, ಶಂಭು, ಕಿರಣ್, ಪ್ರಭು, ಸಿಂಧುತನಯ, ರವಿ, ನಗರಸಭಾ ಸದಸ್ಯ ಹರೀಶ್ ಇತರರಿದ್ದರು.