ಚಿತ್ರದುರ್ಗ: ಸಂವಿಧಾನ ಬದಲಾಯಿಸುವ,ಶೋಷಿತರ ಪರ ಯೋಜನೆಗಳ ರದ್ದುಗೊಳಿಸುವ ಹುನ್ನಾರು ಕೇಂದ್ರ ಸರ್ಕಾರದ್ದಾಗಿದೆ ಎಂದು ಕರ್ನಾ ಟಕ ಶೋಷಿತರ ಸಮುದಾಯಗಳ ಮಹಾ ಒಕ್ಕೂಟದ ಪ್ರಧಾನ ಸಂಚಾಲಕ ಕೆ.ಎಂ.ರಾಮಚಂದ್ರಪ್ಪ ಹೇಳಿದರು.
ಒಕ್ಕೂಟದ ಜಿಲ್ಲಾ ಘಟಕದಿಂದ ನಗರದ ವಿನಾಯಕ ಕಲ್ಯಾಣ ಮಂಟಪದಲ್ಲಿ ಬುಧವಾರ ಏರ್ಪಡಿಸಿದ್ದ ಮತಜಾಗೃತಿ ಸಭೆ ಅಧ್ಯಕ್ಷತೆ ವ ಹಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ಧರ್ಮ-ಅಧರ್ಮಗಳ ಮಧ್ಯೆ ನಡೆಯುತ್ತಿದ್ದು,ಜಾಗೃತೆ ಮತಚಲಾಯಿಸುವ ಂತೆ ಜನರಿಗೆ ಮನವಿ ಮಾಡಿದರು.
ಸುಳ್ಳುಗಳೊಂದಿಗೆ ಆಡಳಿತ ನಡೆಸುತ್ತಿರುವ ಬಿಜೆಪಿ ಸಂವಿಧಾನದ ವಿರುದ್ಧವಾಗಿದೆ,ಯುವಕರಿಗೆ ಧರ್ಮದ ಅಫೀಮು ತಿನ್ನಿಸುತ್ತಿದೆ. ಇ ಷ್ಟು ವರ್ಷಗಳ ಕಾಲ ಹಿಂದು-ಮುಸ್ಲಿಂರು ಸಹಬಾಳ್ವೆ ನಡೆಸುತ್ತಿಲ್ಲವೇ?ಮನುವಾದ ವಿರುದ್ಧ ಹಾಗೂ ಸಾಮಾಜಿಕ ನ್ಯಾಯದ ಪರವಾಗಿ ಮತ ಹಾಕಬೇಕಿದೆ. ಗ್ಯಾರಂಟಿಗಳನ್ನು ಗೇಲಿ ಮಾಡುವ ಬಿಜೆಪಿ ರೈತರ ಸಾಲದ ಬದಲು ಬಂಡವಾಳ ಶಾಹಿಗಳ ಸಾಲ ಮನ್ನಾ ಮಾಡಿದೆ. ಬ್ರಿ ಟಿಷರಿಂದಾಗಿ ಶೋಷಿತರಿಗೆ ವಿದ್ಯಾಭ್ಯಾಸ ದೊರಕಿದೆ. ಮೀಸಲಾತಿ ವಿರುದ್ಧವಿರುವ ಬಿಜೆಪಿ ಯಾವ ನೈತಿಕತೆಯಿಂದ ಮತ ಕೇಳುತ್ತದೆ ಎಂ ದು ಪ್ರಶ್ನಿಸಿದರು.
ವಕೀಲ ಪ್ರೊ.ರವಿವರ್ಮಾಕುಮಾರ್‌ಮಾತನಾಡಿ,ಹೊಸ ಪಾರ್ಲಿಮೆಂಟ್ ಉದ್ಘಾಟನೆಗೆ ದಲಿತ ವರ್ಗಕ್ಕೆ ಸೇರಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಪ್ರಧಾನಿ ನರೇಂದ್ರ ಮೋದಿ ಕರೆಯಲಿಲ್ಲ. ಕಾಂಗ್ರೆಸ್ ಗೆದ್ದು ಮುರ್ಮು ಅವರಿಂದ ಪಾರ್ಲಿಮೆಂಟ್‌ನ್ನು ಮತ್ತೆ ಉ ದ್ಘಾಟಿಸ ಬೇಕಿದೆ. ತನ್ನ ವಿರುದ್ಧ ನಿಷೇಧವನ್ನು ಆರ್‌ಎಸ್‌ಎಸ್ ಕೋರ್ಟಿನಲ್ಲಿ ಪ್ರಶ್ನಿಸಲಿಲ್ಲ. ಮೋದಿ ಮುಖ ತೋರಿಸಿ ಆರ್‌ಎಸ್‌ಎಸ್ ಆಡ ಳಿತ ನಡೆಸುತ್ತಿದೆ. ಸಂವಿಧಾನ ವಿರೋಧಿ,ಸರ್ವಾಧಿಕಾರಿಯಾಗಿರುವ ಕೇಂದ್ರ ಸರ್ಕಾರವನ್ನು ಬದಲಾಯಿಸಬೇಕಿದೆ ಎಂದರು.
ಡಿಎಸ್‌ಎಸ್ ಮುಖಂಡ ಡಿ.ದುರ್ಗೇಶ್ ಮಾತನಾಡಿ,ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ನಮಗೆ ಮತ ಹಕ್ಕು ಹಾಗೂ ಸ ಮಾನತೆ ಕೊಟ್ಟಿದೆ. ದೇಶದ ಶೇ.85 ಅಹಿಂದ ಜನರಿಗೆ ಅನ್ಯಾಯ ಮಾಡುತ್ತಿರುವ ಬಿಜೆಪಿ ಗೆದ್ದ ರೆ,ಅಹಿಂದ ಜನ ರಿಗೆ ಶಕ್ತಿ,ದನಿ ಇಲ್ಲವಾ ಗುತ್ತದೆ ಎಂದರು.
ನಿವೃತ್ತ ಐಪಿಎಸ್ ಅಧಿಕಾರಿ ಕೆ.ಅರ್ಕೇಶ್,ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ,ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ, ಕರ್ನಾಟಕ ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಡಾ.ಬಿ.ಯೋಗೇಶ್‌ಬಾಬು,ಕೆಪಿಸಿಸಿ ಕಾರ‌್ಯದರ್ಶಿ ಪಿ.ರಘು,ಚಳ್ಳಕೆರೆ ಸೈಯದ್‌ಸಾಬ್,ನಿವೃತ್ತ ಜಿಲ್ಲಾಧಿಕಾರಿ ಭಕ್ತರಾಮೇಗೌಡ,ವಕೀಲ ಎನ್.ಅ ನಂತನಾಯ್ಕ ಇತರರು ಮಾತನಾಡಿದರು.
ಡಾ.ಎಚ್.ರವಿ ಮಾಕಳಿ,ಎಂ.ಕೆ.ತಾಜ್‌ಪೀರ್,ವೈ.ಮಹೇಶ್,ಶಶಿಕಲಾಸುರೇಶ್‌ಬಾಬು,ವಿಶಾಲಾಕ್ಷಿ ನಟರಾಜ್,ಕೃಷ್ಣಮೂರ್ತಿ,ನರಸಿಂಹ ರಾಜು,ಡಿ.ಕೆ.ಶಿವಮೂರ್ತಿ,ಕೃಷ್ಣಪ್ಪ,ಎಚ್.ಡಿ.ರಂಗಯ್ಯ,ಎಚ್.ಮಂಜಪ್ಪ,ಬಿ.ಟಿ.ಜಗದೀಶ್,ಜಯಣ್ಣ,ರಾಜಾನಾಯ್ಕ,ದೊಡ್ಡುಳ್ಳಾರ್ತಿ ಕರಿ ಯಣ್ಣ, ಶಿವಪ್ಪ,ಮೃತ್ಯುಂಜಯಪ್ಪ,ಟಿಪ್ಪುಅಲಿಖಾಸಿಂ,ಪ್ರಸನ್ನ,ಎನ್.ಡಿ.ಕುಮಾರ್,ಸಿ.ಕೆ.ಕುಮಾರ್,ಬಾಲಕೃಷ್ಣಸ್ವಾಮಿ,ದೊಡ್ಡರಂಗಣ್ಣ,ಆ ನಂದಕುಮಾರ್,ಲಕ್ಷ್ಮೀಕಾಂತ್,ಕೆ.ಟಿ.ಶಿವಕುಮಾರ್,ಡಾ.ಸುನೀಲ್‌ಕುಮಾರ್,ಅಬ್ದುಲ್ಲಾ,ನಟರಾಜ್ ಮತ್ತಿತರರು ಇದ್ದರು.