ಬಿಜೆಪಿ ಮುಖಂಡ ಶಶಿಕಾಂತ ಪಾಟೀಲ ಅವರು ಸಾಮಾಜಿಕ ಜಾಲತಾಣಗಳಲ್ಲಿ ನಗ್ನ ಚಿತ್ರ ಹರಿಬಿಟ್ಟಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿದರು. ವಿನಯ ನಾವಲಗಟ್ಟಿ, ಪ್ರದೀಪ ಜಿ., ಇಮ್ರಾನ್ ತಪಕೀರ್, ರೋಹಿಣಿ ಬಾಬಶೇಟ್, ಭಾರತಿ ಕೋರ್ಪಡೆ ಇತರರಿದ್ದರು. 
ಜಿಲ್ಲೆ

ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ಚಿತ್ರ

ಬೆಳಗಾವಿ: ಬಿಜೆಪಿ ಮಹಾನಗರ ಘಟಕದ ಅಧ್ಯಕ್ಷ ಶಶಿಕಾಂತ ಪಾಟೀಲ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮದೇ ನಗ್ನ ಚಿತ್ರ ಹರಿಬಿಟ್ಟಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು ನಗರದ ಕಾಂಗ್ರೆಸ್ ಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಶುಕ್ರವಾರ ಪ್ರತಿಭಟನೆ ನಡೆಸಿದರು. ಬಳಿಕ ಅವರ ವಿರುದ್ಧ ಸೈಬರ್ ಕ್ರೈಂ ಪ್ರಕರಣ ದಾಖಲಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಶಶಿಕಾಂತ ಪಾಟೀಲ ಅವರಿಗೆ ಜನರ ಮಧ್ಯೆ ಇರುವ ನೈತಿಕತೆ ಇಲ್ಲ. ಇವರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಖಾಸಗಿ ಚಿತ್ರದ ವಿರುದ್ಧ ಸೈಬರ್ ಕ್ರೈಂ ಅಪರಾಧವೆಂದು ಪರಿಗಣಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಅವರು ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ. ಕೂಡಲೇ ಇವರನ್ನು ಬಂಧಿಸಿ ಮಾನಸಿಕ ಕೇಂದ್ರಕ್ಕೆ ಕಳುಹಿಸಬೇಕು ಎಂದು ಆಗ್ರಹಿಸಿದರು. ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿನಯ ನಾವಲಗಟ್ಟಿ, ಪ್ರದೀಪ ಜಿ., ಇಮ್ರಾನ್ ತಪಕೀರ್, ಆಯಿಶಾ ಸನದಿ, ರೋಹಿಣಿ ಬಾಬಶೇಟ್, ಭಾರತಿ ಕೋರ್ಪಡೆ, ಶೀತಲ ಮಠಪತಿ, ರಾಜಶ್ರೀ ನಾಯಿಕ ಇತರರಿದ್ದರು.