ಜಿಲ್ಲೆ

ಸಾಮಾಜಿಕ ಜಾಲತಾಣಗಳ ಸದ್ಬಳಕೆಗೆ ಮಾರ್ಗದರ್ಶನ ಅಗತ್ಯ

ಚಿತ್ರದುರ್ಗ: ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಓದಿಗೆ ಪೂರಕವಾಗಿ ಬಳಸಿಕೊಳ್ಳುವಂತೆ ಶಿಕ್ಷಕರು ಮಾರ್ಗದರ್ಶನ ಮಾಡಬೇಕೆಂ ದು ಎಂದು ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ(ಸಿ.ಟಿ.ಇ) ಪ್ರವಾಚಕಿ ಸಿ.ಸುಜಾತ ಹೇಳಿದರು. ಶಾಲಾ ಶಿಕ್ಷಣ ಇಲಾಖೆ, ಡಿಎಸ್ ಇಆರ್‌ಟಿ ಆಶ್ರಯದಲ್ಲಿ ನಗರದ ಡಯಟ್‌ನಲ್ಲಿ ಮಂಗಳವಾರ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳ ಸಮಾಜ ವಿಜ್ಞಾನ ಶಿಕ್ಷಕರಿಗೆ ಆಯೋಜಿ ಸಿದ್ದ ತರಬೇತಿ ಕಾರ‌್ಯಕ್ರಮದಲ್ಲಿ ಮಾತನಾಡಿದ ಅವರು, ಮೊಬೈಲ್ ಬಳಕೆ ಮಕ್ಕಳಿಗೆ ಗೀಳಾಗದಂತೆ ಎಚ್ಚರಿಕೆ ವಹಿಸ ಬೇಕೆಂದರು. ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್, ಸಿಟಿಇ ಉಪನ್ಯಾಸಕಿ ಬಿ.ಬಿ.ಸುಧಾ, ಉಪನ್ಯಾಸಕರಾದ ಆರ್.ನಾಗರಾಜು, ಯು.ಸಿದ್ದೇಶಿ, ಎಸ್.ಬಸವ ರಾಜು, ಬಿ.ಎಸ್.ನಿತ್ಯಾನಂದ, ಆರ್.ಲಿಂಗರಾಜು ಮತ್ತು ಶಿಕ್ಷಕರು ಇದ್ದರು.