ಚಿತ್ರದುರ್ಗ:ಸಾಮಾಜಿಕ ಜಾಲತಾಣಗಳನ್ನು ಅತ್ಯಂತ ಜಾಗರೂಕತೆಯಿಂದ ಬಳಸುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ವಿಜಯ್ ಅವರು ವಿದ್ಯಾರ್ಥಿಗಳನ್ನು ಎಚ್ಚರಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ,ವಕೀಲರ ಸಂಘದಿಂದ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಕಾನೂನು ಸಾಕ್ಷರ ತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯಕ್ಕೆ ಸಿಲುಕುವುದರೊಂದಿಗೆ ಕಾನೂನು ಕ್ರಮಕ್ಕೆ ಒಳಗಾಗ ಬೇಕಾಗುತ್ತದೆ ಎಂದರು.
ಸೈಬರ್‌ಅಪರಾಧಗಳು,ಕಾನೂನು ವಿಷಯದ ಕುರಿತು ಪಿಎಸ್‌ಐ ಮಂಜುನಾಥ್,ವಕೀಲರ ಸಂಘದ ಉಪಾಧ್ಯಕ್ಷ ಬಿ.ಎಂ.ಅನಿಲ್‌ಕುಮಾರ್,ಪ್ರಧಾನ ಕಾರ್ಯದರ್ಶಿ ಜಿ.ಆರ್.ಗಂಗಾಧರ್ ಮಾತನಾಡಿದರು. ಪ್ರಾಂಶುಪಾಲ ಪ್ರೊ.ಸಿದ್ರಾಮಪ್ಪ ಚನಗೊಂಡ,ಡಾ.ರಮೇಶ್‌ಅಯ್ಯನಹಳ್ಳಿ,ಪ್ರೊ.ಕೆ.ಬಿ.ವಿದ್ಯಾ,ಡಾ.ಮಹೇಶ್‌ನಾಯಕ್ ಮತ್ತಿತರರು ಇದ್ದರು.
(ಸಿಟಿಡಿ 27 ಎಂ.ವಿಜಯ್)