ಬೆಳಗಾವಿ ರಾಮತೀರ್ಥನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕುಂದರನಾಡ ರಹವಾಸಿಗಳ ಸಂಘದಿಂದ ದೀಪಕ ಗುಡಗನಟ್ಟಿ, ಡಾ.ಸುನೀಲ ಪಾಟೀಲ, ಗೂಳಪ್ಪ ಹೊಸಮನಿ ಅವರನ್ನು ಸನ್ಮಾನಿಸಲಾಯಿತು. ಎಸಿ ರವೀಂದ್ರ ಕರಲಿಂಗಣ್ಣವರ, ಡಾ.ಮಹೇಶ ಕೋಣಿ, ಗೂಳಪ್ಪ ಹೊಸಮನಿ, ಎನ್.ಬಿ.ನಿರ್ವಾಣಿ ಇದ್ದರು. 
ಜಿಲ್ಲೆ

ಸಾಮಾಜಿಕ ಕಾರ್ಯ ಶ್ಲಾಘನೀಯ

ಬೆಳಗಾವಿ: ಬದುಕಿನ ಸಾರ್ಥಕತೆಗೆ ಸಮಾಜ ಸೇವೆಯೂ ಒಂದು ಪವಿತ್ರ ಕಾರ್ಯ. ಸಮಾಜದ ಹಿತ ಚಿಂತನೆಯಲ್ಲಿ ತೊಡಗಿದ ಕುಂದರನಾಡ ಸಂಘದ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಬೆಳಗಾವಿ ಉಪವಿಭಾಗಾಕಾರಿ ರವೀಂದ್ರ ಕರಲಿಂಗಣ್ಣವರ ಹೇಳಿದರು.

ಇಲ್ಲಿನ ರಾಮತೀರ್ಥ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಕುಂದರನಾಡ ರಹವಾಸಿಗಳ ಸಂಘ’ದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಸಂಘದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಇಂಥ ಸಂಘಟನೆಗಳಿಂದ ನಗರ ನಿವಾಸಿಗಳ ಪರಸ್ಪರ ಸಂಬಂಧ ಗಟ್ಟಿಗೊಂಡು, ಸರ್ವರೂ ಏಕತೆಯಿಂದ ಬದುಕಲು ಸಾಧ್ಯವಾಗುತ್ತದೆ ಎಂದರು.

ಜಿಲ್ಲಾ ಆರೋಗ್ಯಾಕಾರಿ ಡಾ.ಮಹೇಶ ಕೋಣಿ ಮಾತನಾಡಿದರು. ಸಂಘದ ಅಧ್ಯಕ್ಷ ಎನ್.ಬಿ.ನಿರ್ವಾಣಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ದೀಪಕ ಗುಡಗನಟ್ಟಿ, ಡಾ.ಸುನೀಲ ಪಾಟೀಲ, ಗೂಳಪ್ಪ ಹೊಸಮನಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ಐ.ಬಿ.ನಿರ್ವಾಣಿ ವಾರ್ಷಿಕ ವರದಿ ವಾಚಿಸಿದರು. ಸುರೇಶ ಮುಳಕೂರಿ, ಬಸವರಾಜ ವಾಲಿ, ಆನಂದ ಪಾಟೀಲ, ಅಶೋಕ ಗೋವೇಕರ, ಮಹಾನಿಂಗಪ್ಪ ಹೊಸಮನಿ ಇತರರಿದ್ದರು. ಉಪಾಧ್ಯಕ್ಷ, ಆರ್.ಟಿ.ಕುರಪಿ ಸ್ವಾಗತಿಸಿದರು. ಬಾಳಪ್ಪ ರಾಯಣ್ಣವರ ಪ್ರಾರ್ಥಿಸಿದರು. ಪ್ರೊ.ಎ.ಕೆ.ಪಾಟೀಲ ವಂದಿಸಿದರು. ಸುರೇಶ ಉರಬಿನಹಟ್ಟಿ, ಗುರುದೇವ ಪಾಟೀಲ ನಿರೂಪಿಸಿದರು.