ಚಿಕ್ಕೋಡಿ: ಹನ್ನೆರಡನೇ ಶತಮಾನದಲ್ಲಿಯೇ ಬಸವಣ್ಣನವರು ಸಮಾನತೆ ತಂದು ಕೊಟ್ಟಿದ್ದಾರೆ. ಅವರ ವಿಚಾರಗಳನ್ನು ಯುವ ಪೀಳಿಗೆ ಅಳವಡಿಸಿಕೊಂಡಲ್ಲಿ ಜೀವನ ಸಾರ್ಥಕವಾಗುತ್ತದೆ ಎಂದು ಸಂಪದನಾ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ಹೇಳಿದರು.
ಪಟ್ಟಣದ ಸಂಪಾದನಾ ಚರಮೂರ್ತಿ ಮಠದ ಸಭಾಭವನದಲ್ಲಿ ಬೀದರ ಲಿಂಗಾಯತ ನೌಕರರ ಸಂಘ (ರಿ) ತಾಲೂಕು ಹಾಗೂ ಶೈಕ್ಷಣಿಕ ಜಿಲ್ಲಾ ಘಟಕ, ಚಿಕ್ಕೋಡಿ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವಗುರು ಬಸವಣ್ಣ ಜಯಂತ್ಯುತ್ಸವ ಹಾಗೂ ಲಿಂಗಾಯತ ನೌಕರರ ಸಮಾವೇಶದಲ್ಲಿ ಮಾತನಾಡಿ, ಜಾತಿ ರಹಿತ ಸಮಾಜದ ಕನಸು ಕಂಡವರು ಬಸವಣ್ಣ. ಸಮಾಜದಲ್ಲಿ ಸಾಮರಸ್ಯ ತರಲು ಅವರ ತತ್ತ್ವಗಳನ್ನು ಹೆಚ್ಚು ಪ್ರಸಾರ ಮಾಡಬೇಕಿದೆ ಎಂದು ತಿಳಿಸಿದರು.
ಡಿಡಿಪಿಐ ಕಚೇರಿಯ ಡಿವೈಪಿಸಿ ರೇವತಿ ಮಠದ ಮಾತನಾಡಿ, ಬಸವಣ್ಣನವರು ಜನಸಾಮಾನ್ಯರಿಗೆ ಅರ್ಥವಾಗುವಂತೆ ಸರಳ ರೀತಿಯಲ್ಲಿ ವಚನಗಳನ್ನು ರಚಿಸಿ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ ಲಿಂಗಾಯತ ಸಮಾವೇಶಕ್ಕೆ ಚಾಲನೆ ನೀಡಿದರು. ನಿವೃತ್ತ ಶಿಕ್ಷಕ ಸಿ.ಬಿ.ಅರಭಾಂವಿ ಮಾತನಾಡಿದರು.
ನಿವೃತ್ತ ಪ್ರಾಧ್ಯಾಪಕ ಎಸ್.ವೈ.ಹಂಜಿ, ಗಣ್ಯರಾದ ಪಿ.ಬಿ.ಹಿರೇಮಠ, ರೇವತಿ ಮಠದ, ರಾಜಶೇಖರ ಪಾಟೀಲ, ಮಲ್ಲಪ್ಪ, ರಾಹುತನವರ, ಎಂ.ಟಿ.ಜನಗೌಡ, ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಎ.ಕುಂಬಾರ, ವೀಣಾ ಸೋಲಬನ್ನವರ, ಎಸ್.ಎ.ಖಡ್ಡ, ಸದಾಶಿವ ಹಚಡದ, ಎನ್.ಜಿ.ಪಾಟೀಲ, ಬಿ.ಡಿ.ಕುಂಬಾರರ, ನಿರಂಜನ ಪೂಜಾರಿ, ಎಸ್.ವೈ. ಹಂಜಿ, ಬಿ.ಎ.ಪಾಟೀಲ, ಎಸ್.ಬಿ.ಸೊಲ್ಲಾಪುರೆ, ಅಜೇಯ ಉದೋಶಿ, ಎ.ಎಸ್.ಖಡಗಾಂವಿ, ಸಿಪಿಐ ವಿಶ್ವನಾಥ ಚೌಗಲಾ, ಪಿಎಸ್‌ಐ ಬಸವರಾಜ ನೇರ್ಲಿ, ಪಿಎಸ್‌ಐ ರೂಪಾಲಿ ಗುಡ್ಡೋಡಗಿ, ಚಂದ್ರಶೇಖರ ಅರಭಾವಿ, ಜಿ.ಬಿ.ಸಂಗಟೆ, ಬಿ.ಐ.ಪಾಟೀಲ, ಎಸ್.ಎ.ಖಡ್ಡ ಇತರರಿದ್ದರು. ಪಿ.ಸಿ.ಪಾಯನ್ನವರ ಸ್ವಾಗತಿಸಿದರು. ಎಸ್.ಬಿ.ಸೊಲ್ಲಾಪುರೆ ವಂದಿಸಿದರು.