ಜಿಲ್ಲೆ

ಸಾಫ್ಟ್‌ಬಾಲ್ ಪಂದ್ಯಾವಳಿಗೆ ಚಾಲನೆ

ಚಿತ್ರದುರ್ಗ: ಕ್ರೀಡೆ ಮನಸ್ಸಿನ ಉಲ್ಲಾಸಕ್ಕೆ ಸಹಕಾರಿ ಎಂದು ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಹೇಳಿದರು.

ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೋಮವಾರ ಏರ್ಪಡಿಸಿದ್ದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮಟ್ಟದ ಪುರು ಷ ಹಾಗೂ ಮಹಿಳೆಯರ ಸಾಫ್ಟ್‌ಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ಕ್ರೀಡೆಗಳು ನಮ್ಮ ಮನಸ್ಸಿಗೆ ಸಂತೋಷ ನೀಡುವುದರ ಜತೆಗೆ ದೇಹಕ್ಕೆ ಚೈತನ್ಯ ತುಂಬುತ್ತವೆ, ಜಡತ್ವ ನಿವಾರಿಸುತ್ತವೆ ಎಂದರು.

ಪ್ರಾಚಾರ್ಯ ಡಾ.ಪಿ.ಬಿ. ಭರತ್, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕೆ. ಕುಮಾರಸ್ವಾಮಿ, ಸಾಫ್ಟ್‌ಬಾಲ್, ಬೇಸ್‌ಬಾಲ್ ಅಂತಾರಾಷ್ಟ್ರೀಯ ತರಬೇತುದಾರ ಎಸ್.ಎನ್. ಗೋಪಿ ಮತ್ತಿತರರು ಇದ್ದರು.

ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಇಂಜಿನಿಯರಿಂಗ್ ಕಾಲೇಜುಗಳ 18 ತಂಡಗಳು ಭಾಗವಹಿಸಿವೆ. ನ. 14ರಂದು ಪಂದ್ಯಾವಳಿ ಸಮಾರೋಪ ಸಮಾರಂಭ ನಡೆಯಲಿದೆ. ಇದೇ ಸಂದರ್ಭದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಾಫ್ಟ್‌ಬಾಲ್ ತಂಡದ ಆಯ್ಕೆ ನಡೆಯಲಿದೆ.

ಪ್ರಣತಿ ಪ್ರಾರ್ಥಿಸಿದರು. ಆರ್. ರಕ್ಷಿತಾ ಸ್ವಾಗತಿಸಿ, ಕೆ.ತಾರುಣ್ಯ ವಂದಿಸಿದರು. ಕೆ. ರುಚಿತಾ ನಿರೂಪಿಸಿದರು.