ಕಾಳೇನಹಳ್ಳಿ ಶಿವಯೋಗಾಶ್ರಮದಲ್ಲಿ ಲಿಂ. ಶ್ರೀರುದ್ರಮುನಿ ಸ್ವಾಮಿಗಳ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಶ್ರೀ ಮಹಂತ ಸ್ವಾಮೀಜಿ ಆಶೀರ್ವಚನ ನೀಡಿದರು. ದಯಾಶಂಕರ್, ರುದ್ರಪ್ಪಯ್ಯ, ಶಿವಪ್ಪಯ್ಯ, ಕುಮಾರಸ್ವಾಮಿ ಹಿರೇಮಠ ಇತರರಿದ್ದರು. 
ಜಿಲ್ಲೆ

ಸಾಧು ಸಂತರ ಬದುಕು ಶುದ್ಧ ಜಲವಿದ್ದಂತೆ

ಶಿಕಾರಿಪುರ: ದಾರ್ಶನಿಕರು, ಸಾಧು ಸಂತರ ಬದುಕು ಪರಿಶುದ್ಧ ಜಲವಿದ್ದಂತೆ. ಅವರು ಯಾವಾಗಲೂ ನುಡಿದಂತೆ ನಡೆಯುವ ನಿರ್ಮಲ ಹೃದಯದವರು ಎಂದು ತಿಪ್ಪಾಯಿಕೊಪ್ಪ ಜಂಗಮಕ್ಷೇತ್ರದ ಶ್ರೀ ಮಹಂತ ಸ್ವಾಮೀಜಿ ಹೇಳಿದರು.

ಕಾಳೇನಹಳ್ಳಿ ಶಿವಯೋಗಾಶ್ರಮದಲ್ಲಿ ಲಿಂ. ಶ್ರೀ ರುದ್ರಮುನಿ ಸ್ವಾಮಿಗಳ 37ನೇ ಪುಣ್ಯಾರಾಧನೆ ನಿಮಿತ್ತ ನಡೆದ ರುದ್ರಮುನಿ ಶ್ರೀಗಳ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಿ ಆಶೀರ್ವಚನ ನೀಡಿದ ಅವರು, ಹಾನಗಲ್ ಕುಮಾರಸ್ವಾಮಿಗಳು ಶಿಷ್ಯತ್ವದಲ್ಲಿ ಬೆಳೆದು ಅವರ ಆಣತಿಯಂತೆ ಕಾಳೇನಹಳ್ಳಿಗೆ ಬಂದು ಇಲ್ಲಿನ ಕಾಡನ್ನು ಆಧ್ಯಾತ್ಮಿಕ, ಶ್ರದ್ಧಾಕೇಂದ್ರವನ್ನಾಗಿ ಮಾಡಿದವರು ಲಿಂ.ರುದ್ರಮುನಿ ಸ್ವಾಮೀಜಿ ಎಂದರು.

ಲಿಂ. ರೇವಣಸಿದ್ದ ಸ್ವಾಮೀಜಿ ಆಶಯದಂತೆ ಇಂದು ಕಾಳೇನಹಳ್ಳಿ ಶಿವಯೋಗಾಶ್ರಮದ ಪೀಠಾಕಾರಿಯಾಗಿರುವ ಶ್ರೀ ಸಿದ್ದಲಿಂಗ ಸ್ವಾಮೀಜಿ ದೈವಾಂಶ ಸಂಭೂತರು ಮತ್ತು ಅನುಷ್ಠಾನ ಮೂರ್ತಿಗಳಾಗಿದ್ದಾರೆ. ಈಗ ಅವರ ತಪೋಬಲದಿಂದ ಮತ್ತು ಶ್ರೀಗಳ ಆಶೀರ್ವಾದದಿಂದ ಕಾಳೇನಹಳ್ಳಿ ಶಿವಯೋಗಾಶ್ರಮ ಬೆಳಗುತ್ತಿದೆ. ವರ್ಷದಿಂದ ವರ್ಷಕ್ಕೆ ಮಠಕ್ಕೆ ಬರುವ ಭಕ್ತರ ಸಂಖ್ಯೆಯೂ ಜಾಸ್ತಿಯಾಗುತ್ತಿದೆ ಎಂದು ಹೇಳಿದರು.

ಗೋಣಿಬೀಡು ಮಠದ ಆಡಳಿತಾಕಾರಿ ದಯಾಶಂಕರ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ನಿರ್ದೇಶಕ ಎನ್.ವಿ.ಈರೇಶ್, ರುದ್ರಪ್ಪಯ್ಯ, ಶಿವಪ್ಪಯ್ಯ, ವಿಶ್ವ ಹಿಂದು ಪರಿಷತ್ ತಾಲೂಕು ಅಧ್ಯಕ್ಷ ಕುಮಾರಸ್ವಾಮಿ ಹಿರೇಮಠ, ಮುರುಗೇಶಣ್ಣ, ವೀರೇಶ್ ಕಾಳೇನಹಳ್ಳಿ, ಮಂಜುನಾಥ್, ಅರುಣ್ ಇತರರಿದ್ದರು.