ಬಾಗಲಕೋಟೆ: ಪ್ರತಿ ಮಗುವಿನ ಪ್ರತಿಭೆ ಪ್ರಾಥಮಿಕ ಅಂತರದಿAದ ಗುರುತಿಸಬೇಕಾಗಿದೆ. ಅದಕ್ಕೆ ಗುರುಗಳ ಹಾಗೂ ಪಾಲಕರ ಸಹಕಾರ ಅಗತ್ಯವಾಗಿ ಬೇಕಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ವಿಶ್ರಾಂತ ಅಪರ ಆಯುಕ್ತ, ಬಿವಿವಿ ಸಂಘದ ಬಿ.ಎಚ್.ಆರ್.ಡಿ ನಿರ್ದೇಶಕ ಎಸ್.ಆರ್.ಮನಹಳ್ಳಿ ಹೇಳಿದರು.
ತಾಲೂಕಿನ ಗದ್ದನಕೇರಿ ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲಾ ಆವರಣದಲ್ಲಿ ಈಚೆಗೆ ಸದ್ಭಾವನಾ ನೌಕರರ ಸಮಾಜ ಸೇವಾ ಸಮಿತಿಯ ೧೪ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ದ್ವೀತಿಯ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಧನೆಗೆ ಬಡತನ, ಶ್ರೀಮಂತಿಕೆ ಅಡ್ಡಿಯಾಗುವದಿಲ್ಲ. ಮನಸ್ಸಿನಲ್ಲಿ ದೃಢವಾದ ನಿಶ್ಚಿಯ ಮಾಡಬೇಕು. ಸಮಾಜ, ದೇಶಕ್ಕೆ ಹೊಸದಾಗಿ ಏನನ್ನಾದರು ನೀಡಬೇಕು ಎನ್ನುವ ಬಯಕೆ ಸದಾ ಇರಬೇಕು. ಅಂದಾಗ ಇತಿಹಾಸಪುಟದಲ್ಲಿ ನಮ್ಮ ಹೆಸರು ಉಳಿಯುತ್ತದೆ ಎಂದರು.
ಗದ್ದನಕೇರಿ ಮಳೆರಾಜೇಂದ್ರಸ್ವಾಮಿ ಮಠದ ಮೌನೇಶ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವುದರೊಂದಿಗೆ ಸರ್ಕಾರಿ ಶಾಲೆಗಳಿಗೆ ಕಳುಹಿಸಬೇಕು ಎಂದು ತಿಳಿಸಿದರು.
ಚಿಕ್ಕಶೆಲ್ಲಿಕೇರಿ ಶಿವಜ್ಞಾನ ಪ್ರಕಾಶ ಗುರುಕುಲದ ಅಡಿವೇಶ ಶಾಸ್ತಿçಗಳು, ಸಿ.ಎಸ್.ಶೆಟ್ಟರ, ಶಿವನಗೌಡ ಪಾಟೀಲ, ಮಠಪತಿ ಈರಣ್ಣ ಕುಂಬಾರ, ಮಳಿಯಪ್ಪ ಕುಂಬಾರ, ರಮೇಶ ಜಲಗೇರಿ, ಗುರು ಅಂಗಡಿ, ಹನಮಂತ ಮನ್ನಿಕೇರಿ, ಅಶೋಕ ಮಡಿವಾಳ, ಮಳಿಯಪ್ಪ ಚಿಂಚಲಿ, ಮಹಾಂತೇಶ ಅಂಗಡಿ, ಮಲ್ಲು ಗುಳಬಾಳ, ಶಿವಪ್ಪ ಗುಳೇದ, ಮಂಜು ಶೆಟ್ಟಪ್ಪನ್ನವರ, ಮುತ್ತು ಕರಡಿಗುಡ್ಡ ಇತರರು ಇದ್ದರು.