ಬಾಗಲಕೋಟೆ ಬಿವಿವಿ ಸಂಘದ ನೂತನ ಸಭಾಭವನದಲ್ಲಿ ಬಸವೇಶ್ವರ ಪದವಿ ಪೂರ್ವ ವಾಣಿಜ್ಯ ಮಹಾವಿದ್ಯಾಲಯದಿಂದ ಆಯೋಜಿಸಿದ್ದ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆ, ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಸಾಹಿತಿ ಡಾ. ವಿಜಯಕುಮಾರ ಎಸ್. ಕಟಗಿಹಳ್ಳಿಮಠ ಉದ್ಘಾಟಿಸಿದರು. ಪ್ರಾಚಾರ್ಯ ಡಾ.ಜಗನ್ನಾಥ ವಿ.ಚವ್ಹಾಣ, ಸಾಂಸ್ಕೃತಿಕ ಚಟುವಟಿಕೆ ಕಾರ್ಯಾಧ್ಯಕ್ಷ ಪ್ರೊ.ಮುನಿರ ಹುನಗುಂದ, ವಿದ್ಯಾರ್ಥಿ ಪ್ರತಿನಿಧಿ ಪ್ರೀತಿ ದಲಭಂಜನ ಉಪಸ್ಥಿತರಿದ್ದರು. 
ಜಿಲ್ಲೆ

ಸಾಧನೆಗೆ ಆತ್ಮವಿಶ್ವಾಸವೇ ಮೂಲ

ಬಾಗಲಕೋಟೆ: ಶೈಕ್ಷಣಿಕ ಘಟ್ಟದಲ್ಲಿ ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದಬೇಕು. ಪಿಯುಸಿ ಹಂತಗಳಲ್ಲಿ ವಿದ್ಯಾರ್ಥಿಗಳು ಕನಸುಗಳಿಗೆ ನಿರ್ದಿಷ್ಟ ಸ್ವರೂಪವನ್ನು ಕೊಡಬೇಕು. ಅದರೊಂದಿಗೆ ಸಮಾಜ ಗುರುತಿಸುವಂತೆ ಸಾಧನೆ ಮಾಡಬೇಕು ಎಂದು ಸಾಹಿತಿ ಡಾ. ವಿಜಯಕುಮಾರ ಎಸ್. ಕಟಗಿಹಳ್ಳಿಮಠ ಹೇಳಿದರು.

ನಗರದ ಬಿವಿವಿ ಸಂಘದ ನೂತನ ಸಭಾಭವನದಲ್ಲಿ ಶನಿವಾರ ಬಸವೇಶ್ವರ ಪದವಿ ಪೂರ್ವ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ನಕಾರಾತ್ಮಕ ವಿಷಯಗಳಿಗೆ ಅವಕಾಶ ನೀಡದೆ ಸಕಾರಾತ್ಮಕ ವಿಷಯಗಳನ್ನು ಬೆಳೆಸಿಕೊಳ್ಳಬೇಕು. ಸಾಧನೆಗೆ ಮೂಲವೇ ಆತ್ಮವಿಶ್ವಾಸ ಎಂದರು.

ಪ್ರಾಚಾರ್ಯ ಡಾ.ಜಗನ್ನಾಥ ವಿ. ಚವ್ಹಾಣ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ. ಉತ್ತಮ ಭವಿಷ್ಯಕ್ಕಾಗಿ ಆ ಸಾಮರ್ಥ್ಯ ಬಳಸಿಕೊಳ್ಳಬೇಕು. ಕಲಿಕೆಯೊಂದಿಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.

2022-23ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆಗೆ ಐದನೇ ಸ್ಥಾನ ಪಡೆದ ಐಶ್ವರ್ಯ ಹಿರೇಮಠ, ದ್ವಿತೀಯ ಸ್ಥಾನ ಪಡೆದ ಹರ್ಷಿತಾ ಪಟೇಲ್, ವಿನಾಯಕ ಎಂ., ತೃತೀಯ ಸ್ಥಾನ ಪಡೆದ ಶಶಾಂಕ ವಾಲಿಕಾರಗೆ ಸನ್ಮಾನಿಸಲಾಯಿತು.

ಸಾಂಸ್ಕೃತಿಕ ಚಟುವಟಿಕೆ ಕಾರ್ಯಾಧ್ಯಕ್ಷ ಪ್ರೊ.ಮುನಿರ ಹುನಗುಂದ, ವಿದ್ಯಾರ್ಥಿ ಪ್ರತಿನಿಧಿ ಪ್ರೀತಿ ದಲಭಂಜನ ಉಪಸ್ಥಿತರಿದ್ದರು. ದೈಹಿಕ ನಿರ್ದೇಶಕ ಸದಾಶಿವ ಕೋಟ್ಯಾಳ ವಂದಿಸಿದರು. ಪ್ರೊ.ಶಕುಂತಲಾ ಬರಗಿ ನಿರೂಪಿಸಿದರು. ಜಿ.ಎಸ್.ಶೆಲ್ಲಿಕೇರಿ ಸ್ವಾಗತಿಸಿದರು. ಎಸ್.ಐ.ಪತ್ತಾರ ಪರಿಚಯಿಸಿದರು.