ಜಿಲ್ಲೆ

ಸಾಧನೆ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳಲಿ

ರಾಯಬಾಗ: ವಿದ್ಯಾರ್ಥಿಗಳು ಅವಕಾಶಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದು ರಾಣಿ ಚನ್ನಮ್ಮ ವಿವಿ ವಿದ್ಯಾವಿಷಕ ಪರಿಷತ್ ಸದಸ್ಯೆ ಡಾ.ನಿರ್ಮಲಾ ಬಟ್ಟಲ ಹೇಳಿದರು.

ಪಟ್ಟಣದ ಬಿ.ಎ.ಚೌಗುಲೆ ಶಿಕ್ಷಣ ಸಂಸ್ಥೆಯ ಹೀರಾಬಾಯಿ ಭರಮಾ ಚೌಗುಲೆ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕ್ರೀಡೆ, ಎನ್‌ಎಸ್‌ಎಸ್ ಚಟುವಟಿಕೆಗಳ ಸಮಾರೋಪ ಹಾಗೂ ಬಿಎ, ಬಿಕಾಂ, ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಚೌಗುಲೆ ಶಿಕ್ಷಣ ಸಂಸ್ಥೆಯು ಗ್ರಾಮೀಣ ಭಾಗದ ವಿದ್ಯಾರ್ಥಿನಿಯರಿಗೆ ಶಿಕ್ಷಣ ನೀಡಲು ಶ್ರಮಿಸುತ್ತಿರುವ ಕಾರ್ಯ ಅತ್ಯಂತ ಶ್ಲಾಘನೀಯ. ವಿದ್ಯಾರ್ಥಿಗಳು ಸಾಧನೆಗಳ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂದರು.

ಸಂಸ್ಥೆ ಅಧ್ಯಕ್ಷ ಎಲ್.ಬಿ.ಚೌಗುಲೆ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದೊಟ್ಟಿಗೆ ಉತ್ತಮ ಸಂಸ್ಕಾರ ಕಲಿತುಕೊಳ್ಳಬೇಕೆಂದರು.

ಸಂಸ್ಥೆ ಕಾರ್ಯದರ್ಶಿ ವಿನಯ ಚೌಗುಲೆ, ಪ್ರಾಚಾರ್ಯ ಎಸ್.ಎಸ್.ದಿಗ್ಗೇವಾಡಿ, ಸೋನಾಲ ಚಿನ್ನವಾಲ, ವಿದ್ಯಾರ್ಥಿ ಪ್ರತಿನಿಧಿಗಳಾದ ಶಾನೂರ ಶಿವಾಪುರೆ, ಮಹಾದೇವಿ ಸಪ್ತಸಾಗರೆ, ಉಪನ್ಯಾಸಕರಾದ ಪಿ.ಡಿ.ಲಂಗೋಟೆ, ಎ.ಎಂ.ಕಾಂಬಳೆ, ಡಾ.ಸಿ.ವೈ.ಬೆಳಗಲಿ, ಗಜಾನನ ಪೂಜಾರಿ, ಐ.ವೈ.ನಂದಗಡ, ಎಸ್.ಎ.ಹೆಗಡೆ ಇತರರು ಇದ್ದರು. ಪ್ರಾಚಾರ್ಯ ಎಸ್.ಎಸ್.ದಿಗ್ಗೇವಾಡಿ ಸ್ವಾಗತಿಸಿದರು. ಎ.ಎಂ.ಕಾಂಬಳೆ ವಂದಿಸಿದರು. ಎ.ವಿ.ಕಾಂಬಳೆ ನಿರೂಪಿಸಿದರು.