ಚಿತ್ರದುರ್ಗ: ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಅಡಿಪ್ ಯೋಜನೆಯಡಿ ಅಂಗವಿಕಲರಿಗೆ ಸಾಧನ ಸಲಕರಣೆಗಳನ್ನು ಉಚಿತವಾಗಿ ವಿತರಿಸಲಿದೆ. ಈ ಹಿನ್ನೆಲೆಯಲ್ಲಿ ಜುಲೈ 17ರಿಂದ 22ರವರೆಗೆ ಬೆಳ್ಗಗೆ 10ಗಂಟೆಯಿಂದ ಜಿಲ್ಲೆಯ ಆರು ತಾಲೂಕು ಕೇಂದ್ರ ಗ ಳಲ್ಲಿ ವೈದ್ಯಕೀಯ ತಪಾಸಣಾ ಶಿಬಿರಗಳನ್ನು ಏರ್ಪಡಿಸಲಾಗಿದೆ.
ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರ ನಿರ್ದೇಶನದಂತೆ ಜಿಲ್ಲೆ ಯ ಅಂಗವಿಕಲರಿಗೆ ಟ್ರೈಸೈಕಲ್,ಗಾಲಿಕುರ್ಚಿ,ಊರುಗೋಲು,ಕೃತಕ ಕಾಲು,ಕೃತಕ ಪಾದ ಇತ್ಯಾದಿ ಅಗತ್ಯ ಸಲಕರಣೆಗಳನ್ನು ವಿತರಿಸಲಾ ಗುತ್ತದೆ.
17ರಂದು ಮೊಳಕಾಲ್ಮೂರಿನ ಕ್ಷೇತ್ರ ಮಾದರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆ,18ರಂದು ಚಿತ್ರದುರ್ಗ ಸರ್ಕಾರಿ ಹಿರಿಯ ಪ್ರಾಥ ಮಿಕ ಶಾಲೆ (ಪಿ.ಪಿ.ಎಸ್)ಗುರುಭವನ ಬಳಿ,19ರಂದು ಹಿರಿಯೂರು ಬಿಆರ್‌ಸಿ ಕೇಂದ್ರ.,20 ರಂದು ಚಳ್ಳಕೆರೆ ಸರ್ಕಾರಿ ಬಾಲಕಿಯರ ಹಿ ರಿಯ ಪ್ರಾಥಮಿಕ ಶಾಲೆ.
21ರಂದು ಹೊಳಲ್ಕೆರೆ ಕನ್ನಡ ಮತ್ತು ಉರ್ದು ಹಿರಿಯ ಪ್ರಾಥಮಿಕ ಶಾಲೆ(ಹೈಟೆಕ್),22ರಂದು ಹೊಸದುರ್ಗದ ಸರ್ಕಾರಿ ಹಿರಿಯ ಪ್ರಾಥಮಿ ಶಾಲೆ(ಅಶೋಕ ರಂಗಮಂದಿರ)ಯಲ್ಲಿ ತಪಾಸಣಾ ಶಿಬಿರ ನಡೆಯಲಿದೆ.
ಅಂಗವಿಕಲರ ವಿಶಿಷ್ಟ ಗುರುತಿನ ಚೀಟಿ ಇತ್ಯಾದಿ ದಾ ಖಲೆಗಳಿರ ಬೇಕು. ಹೆಚ್ಚಿನ ಮಾಹಿತಿಗೆ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು,ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು ಅಥವಾ ಚಿತ್ರದುರ್ಗ ದ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕಚೇರಿ(08194-235284)ಯನ್ನು ಸಂಪರ್ಕಿಸಬಹುದೆಂದು ಜಿಲ್ಲಾ ಅಂಗವಿಕಲರ ಕಲ್ಯಾಣಾ ಧಿಕಾರಿ ಪಿ.ಲೋಕೇಶ್ವರಪ್ಪ ತಿಳಿಸಿದ್ದಾರೆ.