ಚಿತ್ರದುರ್ಗ: ಸಾಧನ-ಸಲಕರಣೆಗಳ ಗುರುತಿಸುವಿಕೆ ಶಿಬಿರದಲ್ಲಿ ಪಾಲ್ಗೊಂಡಿರುವ ಪ್ರತಿಯೊಬ್ಬ ಅಂಗವಿಕಲರು ತಪ್ಪದೇ ತಪಾಸಣೆ ಮಾಡಿಸಿಕೊಂಡು ಇದರ ಸದುಪಯೋಗ ಪಡೆಯಬೇಕು ಎಂದು ಚಿತ್ರದುರ್ಗ ತಾಪಂ ಇಒ ಹನುಮಂತಪ್ಪ ಸಲಹೆ ನೀಡಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ, ಕೃತಕ ಅಂಗಾಂಗ ತಯಾರಿಕಾ ಕಾರ್ಪೋರೆಷನ್ ಆಫ್ ಇಂಡಿಯಾದಿಂದ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೈಹಿಕ, ದೃಷ್ಠಿ, ಶ್ರವಣ ಹಾಗೂ ವಿವಿಧ ರೀತಿಯ ದೋಷ ಎದುರಿಸುತ್ತಿರುವ ಅಂಗವಿಕಲರಿಗೆ ಪ್ರತ್ಯೇಕ ಕೊಠಡಿಗಳಲ್ಲಿ ತಪಾಸಣೆ ನಡೆಸಲಾಗುತ್ತದೆ. ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಅಡಿಪ್ ಯೋಜನೆಯಡಿ ಸಾಧನ-ಸಲಕರಣೆ ವಿತರಿಸಲಾಗುವುದು. ನೋಂದಣಿ ಮಾಡಿಕೊಂಡವರಿಗೆ 15ರಿಂದ 20 ದಿನದೊಳಗೆ ಅವರ ಮೊಬೈಲ್ಗೆ ಸಂದೇಶ ರವಾನೆಯಾಗಲಿದ್ದು, ಆನಂತರ ಸೌಲಭ್ಯ ಪಡೆದುಕೊಳ್ಳಬಹುದು ಎಂದರು.
ಉಚಿತ ಕೃತಕ ಉಪಕರಣಗಳನ್ನು ಪಡೆಯಲು ತಾಲೂಕಿನ ವಿವಿಧೆಡೆಯಿಂದ ಬಂದಿದ್ದ ಅನೇಕ ಅಂಗವಿಕಲರು ತಪಾಸಣೆಗೆ ಒಳಗಾದರು. ಬಿಆರ್‌ಪಿ ರಾಜೀವ್, ಬಿಆರ್‌ಸಿ ರಾಜು, ಬಸವೇಶ್ವರ ವಿದ್ಯಾಸಂಸ್ಥೆ ಕಾರ್ಯದರ್ಶಿ ವಿ.ಕೆ.ಶಂಕರಪ್ಪ, ಎಂಆರ್‌ಡಬ್ಲುೃ ಮೈಲಾರಪ್ಪ, ಅಲಿಂಕೋ ವ್ಯವಸ್ಥಾಪಕ ಅಭಿಷೇಕ್ ಇತರರಿದ್ದರು.