ಜಿಲ್ಲೆ

ಸಾಧಕರಿಗೆ ಸಿರಿಗನ್ನಡ ವೇದಿಕೆಯಿಂದ ಪ್ರಶಸ್ತಿ ಪ್ರದಾನ

ರಾಮದುರ್ಗ: ಸಿರಿಗನ್ನಡ ವೇದಿಕೆ ಜಿಲ್ಲಾ ಟಕ ಬೆಳಗಾವಿ ಅವರು ಕೊಡಮಾಡುವ 2024 ರ "ಸಿರಿಗನ್ನಡ ವೆದ್ಯ ರತ್ನ' ಪ್ರಶಸ್ತಿಗೆ ಸಾಲಹಳ್ಳಿಯ ಡಾ.ಜಾರ್​ ಪನಾರಿ ಆಯ್ಕೆಯಾಗಿದ್ದಾರೆ. "ಸಿರಿಗನ್ನಡ ನಿರ್ವಾಹಕ ರತ್ನ' ಪ್ರಶಸ್ತಿಗೆ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ರಾಮದುರ್ಗ ಟಕದ ನಿರ್ವಾಹಕ ಬಸಪ್ಪ ಹವಳಕೋಡ, ಸುರೇಶ ಬಡಿಗೇರ, ಸಿದ್ದಲಿಂಗೇಶ್ವರ ಆರಿಬೆಂಚಿ, ಉಡಚಪ್ಪ ಕೀರಪ್ಪ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಜು.14 ರಂದು ಬೆಳಗ್ಗೆ 10.30 ಗಂಟೆಗೆ ಸಾಲಹಳ್ಳಿಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಜರುಗುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಾಹಿತಿ ಬಿ.ಸಿ.ದೇಸಾಯಿ ಅವರ ಪ್ರತಿಮೆ ಅನಾವರಣ ಮಾಡಲಾಗುವುದು. ಹಾವೇರಿಯ ರಂಗಕರ್ಮಿ ಸತೀಶ ಕುಲಕರ್ಣಿ ಪ್ರತಿಮೆ ಅನಾವರಣಗೊಳಿಸುವರು. ಬೆಳಗಾವಿಯ ಹಿರಿಯ ಸಾಹಿತಿ ಸರಜೂ ಕಾಟ್ಕರ್​ ಅವರು ದೇಸಾಯಿ ಅವರ ಬದುಕು&ಬರಹ ಕುರಿತು ಮಾತನಾಡುವರು. ರಾಮದುರ್ಗದ ಎಸ್​.ಜಿ.ಚಿಕ್ಕನರಗುಂದ ಪ್ರಶಸ್ತಿ ವಿತರಿಸಲಿದ್ದಾರೆ. ಅಧ್ಯತೆಯನ್ನು ಸುರೇಶ ದೇಸಾಯಿ ವಹಿಸುವರು. ಮುಖ್ಯ ಅತಿಥಿಗಳಾಗಿ ಹನುಮಂತ ವಡ್ಡರ, ರೂಪಾ ಅರಮನಿ, ಹಜರತಸಾಬ್​ ಪೆಲ್ವಾನ್​, ಅತಿಥಿಗಳಾಗಿ ಆರ್​.ಎಸ್​.ಪಾಟೀಲ, ಸುನೀಲ ದೇಸಾಯಿ, ವಿ.ಎಚ್​.ಪೂಜೇರ ಪಾಲ್ಗೊಳ್ಳಲಿದ್ದಾರೆ ಎಂದು ಸುರೇಶ ದೇಸಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.