ಶಿರಗುಪ್ಪಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಅಭಿನಂದ ಬ್ರಹ್ಮಾನಂದ ಸ್ವಾಮೀಜಿ ಉದ್ಘಾಟಿಸಿದರು. ಶಿವಾನಂದ ಪಾಟೀಲ, ಶಿವಗೌಡ ಪಾಟೀಲ, ಐ.ಎ.ಪಾಟೀಲ, ಡಾ.ಸುಬ್ಬರಾವ ಎಂಟೆತ್ತಿನವರ ಇತರರಿದ್ದರು. 
ಜಿಲ್ಲೆ

ಸಾಧಕರಿಗೆ ಸವಾಲುಗಳು ಸಹಜ: ಬ್ರಹ್ಮಾನಂದ ಸ್ವಾಮೀಜಿ ಅಭಿಪ್ರಾಯ

ವಿಠ್ಠಲ ಹಣಮಂತ ಬಾಳೇಕುಂದ್ರಿ

ಮಾಂಜರಿ: ವಿದ್ಯಾರ್ಥಿಗಳು ರ್ನಿದಿಷ್ಟ ಗುರಿ, ಸಮರ್ಥ ಗುರು ಇರದಿದ್ದರೆ ಸರ್ವಸ್ವವನ್ನೂ ಕಳೆದುಕೊಂಡಂತೆ ಎಂದು ಪರಮಾನಂದವಾಡಿಯ ಗುರುದೇವ ಬ್ರಹ್ಮಾನಂದ ಆಶ್ರಮದ ಪೀಠಾಧ್ಯಕ್ಷ ಡಾ.ಅಭಿನವ ಬ್ರಹ್ಮಾನಂದ ಸ್ವಾಮಿಗಳು ಹೇಳಿದರು.

ಸಮೀಪದ ಶಿರಗುಪ್ಪಿ ಗ್ರಾಮದ ಕೆಎಲ್​ಇ ಸಂಸ್ಥೆಯ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ಪ್ರಸಕ್ತ ಸಾಲಿನ ಕ್ರೀಡೆ ಹಾಗೂ ಸಾಂಸತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಇದು ಸಾಧಕರ ಯುಗವಾಗಿದ್ದು, ಸಾಧಿಸದವರು ಸತ್ತ ಹೆಣಕ್ಕೆ ಸಮ. ಅಪೂರ್ವ ಸಾಧನೆಗೆ ದಾರಿಯೂ ಮುಖ್ಯ, ಧೈರ್ಯವೂ ಮುಖ್ಯ. ಸಾಧಕರಿಗೆ ಸವಾಲು ಎದುರಾಗುವುದು ಸಹಜ. ಎಲ್ಲದಕ್ಕೂ ವೈಚಾರಿಕ ನೆಲೆಗಟ್ಟಿನಲ್ಲಿ ಪರಿಹಾರ ಕಂಡುಕೊಂಡು ಗೆಲುವಿನ ದಡ ಮುಟ್ಟಬೇಕು ಎಂದರು.

ಸಾಹಿತಿ ಡಾ.ಸುಬ್ಬರಾವ ಎಂಟೆತ್ತಿನವರ ಮಾತನಾಡಿ, ವಿದ್ಯಾರ್ಥಿಗಳು ಪಾಲಕರ ಕಷ್ಟ ಅರಿತು ಅಧ್ಯಯನ ಮಾಡಬೇಕು. ಕಷ್ಟ ಪಟ್ಟಾಗ ಮಾತ್ರ ಪ್ರತಿಲ ಸಿಗುತ್ತದೆ ಎಂದರು. ಕಳೆದ ಶೈಣಿಕ ಸಾಲಿನಲ್ಲಿ ಪರೀೆಯಲ್ಲಿ ಮೊದಲ ಮೂರು ಸ್ಥಾನ ಪಡೆದ ಪಿಯು ವಿದ್ಯಾರ್ಥಿಗಳಿಗೆ ಹಾಗೂ ಎನ್​ಎಸ್​ಎಸ್​ಯಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿ ಸಾಧಕರನ್ನು ಸನ್ಮಾನಿಸಲಾಯಿತು. ಕಾರ್ಯಾಧ್ಯ ಶಿವಾನಂದ ಪಾಟೀಲ ಅಧ್ಯತೆ ವಹಿಸಿದ್ದರು. ಆಡಳಿತ ಮಂಡಳಿ ಸದಸ್ಯರಾದ ಐ.ಎ.ಪಾಟೀಲ, ಸಾತಗೌಡ ಪಾಟೀಲ, ಆರ್​.ಎಂ.ಪಾಟೀಲ, ಆರ್​.ಎಸ್​.ಪಾಟೀಲ, ಎಂ.ಬಿ.ಪಾಟೀಲ, ಪ್ರಾಚಾರ್ಯ ಪ್ರೊ.ಎಸ್​.ಬಿ.ಪಾಟೀಲ, ಪ್ರೊ.ಎಸ್​.ಬಿ. ಚೌಗಲೆ, ಪ್ರೊ.ಆರ್​.ಡಿ. ಪವಾರ, ಪ್ರೊ.ಆರ್​.ಡಿ.ಪಾಟೀಲ, ಪ್ರೊ.ಎಂ.ಕೆ.ಕೋಟೆ ಇತರರಿದ್ದರು.