ಜಿಲ್ಲೆ

ಸಾಧಕರಿಗೆ ಎಸ್ಬಿಆರ್ ಸನ್ಮಾನ

ಕಲಬುರಗಿ: ಶರಣಬಸವೇಶ್ವರ ವಸತಿ ಸಂಯುಕ್ತ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಜಿಲ್ಲೆ, ರಾಜ್ಯ ಮಟ್ಟವಲ್ಲದೆ ಸಾಧನೆ ಜತೆಗೆ ನೀಟ್, ಜೆಇಇಗಳಲ್ಲಿ ಪ್ರತಿಭೆ ಮೆರೆದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯಗಳ ಮಾದರಿ ಪ್ರಶಸ್ತಿ, ಗೌರವಧನ ನೀಡುವ ಮೂಲಕ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.

ಪೂಜ್ಯ ಬಸವರಾಜಪ್ಪ ಅಪ್ಪ ಮೆಮೋರಿಯಲ್ ಸಭಾಂಗಣದಲ್ಲಿ ಕಾಲೇಜಿನ ಮಿನಿ ಘಟಿಕೋತ್ಸವ ಭಾನುವಾರ ಅತ್ಯಂತ ಶಿಸ್ತುಬದ್ಧವಾಗಿ ನಡೆಯಿತು. ಎನ್ಸಿಸಿ ವಿದ್ಯಾರ್ಥಿಗಳ ಪಥಸಂಚಲನ, ಗಂಭೀರ ನಡಿಗೆ ಮಧ್ಯೆ ಅತಿಥಿಗಳನ್ನು ಸ್ವಾಗತಿಸಲಾಯಿತು.

ನೀಟ್, ಜೆಇಇ, ಪಿಯು ಬೋರ್ಡ್​ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ, ರ್ಯಾಂಕ್ ಪಡೆದ ವಿದ್ಯಾರ್ಥಿಗಳು ಮತ್ತು ಪಾಲಕರನ್ನು ಎನ್ಸಿಸಿ ಕೆಡೆಟ್​ಗಳು ಬ್ಯಾಂಡ್ನ ಪಥಸಂಚಲನದೊಂದಿಗೆ ವೇದಿಕೆವರೆಗೆ ಕರೆತಂದ ಬಳಿಕ ಸನ್ಮಾನಿಸಲಾಯಿತು.

ಶರಣಬಸವ ವಿವಿ ಕುಲಪತಿ ಡಾ.ನಿರಂಜನ್ ನಿಷ್ಠಿ ಅಧ್ಯಕ್ಷತೆ ವಹಿಸಿದ್ದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಭಾಗವಹಿಸಿದ್ದರು. ಪ್ರಾಚಾರ್ಯ ಡಾ.ಶ್ರೀಶೈಲ್ ಹೊಗಾಡೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶಂಕರಗೌಡ ಹೊಸಮನಿ ನಿರೂಪಣೆ ಮಾಡಿದರು.

ಸನ್ಮಾನ ಸ್ವೀಕರಿಸಿದ ವಿದ್ಯಾರ್ಥಿಗಳು
ನೀಟ್ ಟಾಪರ್ಸ್:
ಅಜಯ ಕುಲ್ಕರ್ಣಿ (1 ಲಕ್ಷ ರೂ. ಬಹುಮಾನ), ಪ್ರಭು ಕಲಶೆಟ್ಟಿ (50 ಸಾವಿರ ರೂ.), ಸುಮಿತ್ ಕುಲ್ಕರ್ಣಿ (25 ಸಾವಿರ ರೂ.).

ಜೆಇಇ ಟಾಪರ್: ಜಯ ರಾಜೇಶ ಭಾನುಶಾಲಿ, ಶಿವರಾಜ ಕೊಳ್ಳಿ (25 ಸಾವಿರ ರೂ.).

ಪಿಯು ಬೋರ್ಡ್​ ಜಿಲ್ಲಾ ಟಾಪರ್: ಮಲ್ಲಿಕಾರ್ಜುನ ಎಸ್., ಶ್ರೇಯಾ ಲೋಯಾ.

ನೀಟ್ ಟಾಪರ್ಸ್: ಸಾತ್ವಿಕ ಮೈಲಾಪುರ, ಶ್ರೀಪಾದ ಜೋಶಿ, ನಾಗನಗೌಡ ಎನ್.ಉಜೈರ್ ಪಟೇಲ್, ಅಖಿಲೇಶ ದೇಸಾಯಿ, ಪ್ರತೀಕ ಎಸ್.ಎಸ್., ಶಾಂತಕುಮಾರ ಎಸ್ (11 ಸಾವಿರ ರೂ. ಬಹುಮಾನ).

ಥೀಯರಿ ಟಾಪರ್: ಕೃತಿಕಾ ಬಿಎಸ್, ಅಭಿಜಿತ ಬಿರಾದಾರ, ನಿಖಿತಾ ಎಚ್., ಅವಿನಾಶ ಬಿ., ಶ್ವೇಥಾ ಬಿ, ಸಾಕ್ಷಿ ಎ. ಸೇರಿದಂತೆ ವೈದ್ಯಕೀಯ ಕೋರ್ಸ್​ಗಳಿಗೆ ಪ್ರವೇಶ ಪಡೆದ ಎಲ್ಲ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಪರಿಶ್ರಮದ ಫಲವೇ ಸಾಧನೆ: ಗುರುಗಳ ತಾಳ್ಮೆಯ ಬೋಧನೆ, ಹೆತ್ತವರ ಪ್ರೀತಿ-ಕಾಳಜಿ, ವಿದ್ಯಾರ್ಥಿಗಳ ಪರಿಶ್ರಮದ ಫಲವೇ ಈ ಸಾಧನೆ ವೇದಿಕೆ. ಶ್ರದ್ಧೆಯಿಂದ ಅಧ್ಯಯನ ಮಾಡಿ ಹೆತ್ತವರ ಗೌರವ ಹೆಚ್ಚಿಸಿದ ಎಲ್ಲ ವಿದ್ಯಾರ್ಥಗಳಿಗೆ ಶುಭವಾಗಲಿ ಎಂದು ಶರಣಬಸವ ವಿವಿ ಕುಲಪತಿ ಡಾ.ನಿರಂಜನ್ ನಿಷ್ಠಿ ಶುಭ ಹಾರೈಸಿದರು. ಎಸ್ಬಿಆರ್ ಪಿಯು ಕಾಲೇಜಿನ ಘಟಿಕೋತ್ಸವದಲ್ಲಿ ಅಧ್ಯಕತೆ ವಹಿಸಿದ್ದ ಅವರು, ಶ್ರೀ ಶರಣಬಸವೇಶ್ವರರ ಆಶೀರ್ವಾದದಿಂದ ಎಲ್ಲರೂ ಸಾಧನೆ ಮಾಡಿದ್ದು, ಭವಿಷ್ಯದಲ್ಲಿ ಅತ್ಯುತ್ತಮ ಜ್ಞಾನಿಗಳಾಗಿ ಸಂಸ್ಥೆ ಜತೆಗೆ ಹೆತ್ತವರ ಕೀರ್ತಿ ತರಬೇಕು. ಪ್ರಪಂಚದಲ್ಲಿ ಸುಖವಾಗಿ ಬದುಕಲು ಕಲಿಯಬೇಕು. ಜೀವನದಲ್ಲಿ ಕಲಿಕೆ ನಿರಂತರ ಎಂದು ಹೇಳಿದರು.

ಶರಣಬಸವೇಶ್ವರ ಸಂಸ್ಥಾನದ ಎಲ್ಲ ವಿದ್ಯಾ ಸಂಸ್ಥೆಗಳಲ್ಲಿ ಉತ್ಕೃಷ್ಟ ದರ್ಜೆಯ ಶಿಕ್ಷಣ ನೀಡಲಾಗುತ್ತಿದೆ. ಎಲ್ಲ ಟಾರ್ಪ್​ಗಳು ವಿಜ್ಞಾನಿ, ವೈದ್ಯ, ಇಂಜಿನಿಯರ್ ಸೇರಿ ವೈವಿಧ್ಯಮಯ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು. ಓದು ನಿರಂತರ ಇರಲಿ.
| ಬಸವರಾಜ ದೇಶಮುಖ
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ

ಓದುವ ಹಂಬಲ ಮೂಡಿಸಿ ಸಾಧನೆಗೆ ಪ್ರೇರಣೆ ನೀಡಿದ್ದು ಎಸ್ಬಿಆರ್ ಕಾಲೇಜು. ಉಪನ್ಯಾಸಕರ ಮಾರ್ಗದರ್ಶನ, ಕಠಿಣ ಪರಿಶ್ರಮದಿಂದ ನೀಟ್​ನಲ್ಲಿ ಜಿಲ್ಲೆಗೆ ಟಾಪರ್ ಬರಲು ಸಾಧ್ಯವಾಗಿದೆ. ನಮ್ಮ ತಪ್ಪುಗಳನ್ನು ತಿದ್ದಿ ಹೇಳಿದ್ದನ್ನು ಪುನರ್ ಮನನ ಮಾಡಿದ್ದರಿಂದ ಹೆಚ್ಚಿನ ಅಂಕ ಪಡೆದಿದ್ದೇನೆ.
| ಅಜಯ ಕುಲ್ಕರ್ಣಿ
ನೀಟ್ ಜಿಲ್ಲಾ ಟಾಪರ್

ಯಾವುದೇ ಪರೀಕ್ಷೆ ಎದುರಿಸಿದರೂ ಶ್ರದ್ಧೆಯಿಂದ ಗುರಿ ಇಟ್ಟು ಓದಬೇಕು. ಯಾವ ಕಾರಣಕ್ಕೂ ಉಪನ್ಯಾಸಕರ ಮಾತು ಮೀರಬಾರದು. ಎಲ್ಲರ ಮಾರ್ಗದರ್ಶನ, ಕುಟುಂಬದವರ ಸಹಕಾರದಿಂದ ನೀಟ್ನಲ್ಲಿ ಸಾಧನೆ ಸಾಧ್ಯವಾಗಿದೆ.
| ಪ್ರಭುಲಿಂಗ ಕಶೆಟ್ಟಿ
ನೀಟ್ ಟಾಪರ್