ಜಿಲ್ಲೆ

ಸಾಧಕ ಮಕ್ಕಳಿಗೆ ಪ್ರೋತ್ಸಾಹ ಅಗತ್ಯ

ಬಸವಕಲ್ಯಾಣ: ಕೆಲ ವರ್ಷದ ಹಿಂದೆ ಕೋಲಿ ಸಮಾಜದ ಓರ್ವ ವಿದ್ಯಾರ್ಥಿಯೂ ವೈದ್ಯಕೀಯ, ಐಐಟಿಯಂತಹ ಕೋರ್ಸ್ ಅಧ್ಯಯನ ಮಾಡುತ್ತಿರಲಿಲ್ಲ. ಪ್ರಸ್ತುತ ಕಾಲ ಬದಲಾಗಿದ್ದು, ಹಲವರು ಪ್ರವೇಶಿಸಿದ್ದಾರೆ. ಪ್ರತಿಭಾವಂತ ಮಕ್ಕಳನ್ನು ಪ್ರೋತ್ಸಾಹಿಸುವುದರಿಂದ ಇತರಿಗೆ ಸ್ಫೂರ್ತಿ ದೊರೆಯುತ್ತದೆ ಎಂದು ಟೋಕರಿ ಕೋಳಿ ಸಮಾಜದ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಚನ್ನವೀರ ಜಮಾದಾರ ತಿಳಿಸಿದರು.

ನಗರದ ಉಪನ್ಯಾಸಕರ ಬಡಾವಣೆಯಲ್ಲಿ ತಾಲೂಕು ಟೋಕರಿ ಕೋಳಿ ಸಮಾಜದ ಸರ್ಕಾರಿ ನೌಕರರ ಸಂಘದಿಂದ ಬುಧವಾರ ಏರ್ಪಡಿಸಿದ್ದ ವೈದ್ಯಕೀಯ, ಐಐಟಿ ಕ್ಷೇತ್ರದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಸಮಾಜದ ಹಿರಿಯ ಮುಖಂಡ ನಾರಾಯಣರಾವ ಭಂಗಿ ಮಾತನಾಡಿ, ಸಮಾಜದಲ್ಲಿ ಸಾಕಷ್ಟು ಬಡತನ ಇದೆ. ರಾಜಕೀಯ ಇಚ್ಛಾಶಕ್ತಿಯ ಕೊರತೆಯಿದೆ. ಸಮಾಜ ಶೈಕ್ಷಣಿಕ, ಆರ್ಥಿಕ, ಸಾಂಸ್ಕೃತಿಕ ಹಾಗೂ ರಾಜಕೀಯವಾಗಿ ಬೆಳೆಯಬೇಕಾಗಿದೆ. ನಮಗೆ ರಾಜ್ಯ ಮತ್ತು ಕೇಂದ್ರದಲ್ಲಿ ಪ್ರತಿನಿಧಿತ್ವದ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಿದೆ ಎಂದರು.

ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಮಾಣಿಕ ನೇಳಗಿ ಮಾತನಾಡಿ, ಸಮಾಜ ಸಂಘಟಿತವಾಗಬೇಕು. ಉತ್ತಮ ಶಿಕ್ಷಣ ಪಡೆಯಬೇಕು. ಸಮಾಜಕ್ಕಾಗಿ ದುಡಿಯುವ ತುಡಿತ ನಮ್ಮಲ್ಲಿ ಬರಬೇಕು. ಆಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.

ಹುಲಸೂರ ತಹಸೀಲ್ದಾರ್ ಶಿವಾನಂದ ಮೇತ್ರೆ ಮಾತನಾಡಿ, ಸಮಾಜದ ಪ್ರಗತಿಗೆ ಡಾ.ಬಿ.ಆರ್.ಅಂಬೇಡ್ಕರ್ ಹೇಳಿದಂತೆ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ತತ್ವಗಳನ್ನು ಪಾಲಿಸಬೇಕು ಎಂದರು.

ತಾಪಂ ಮಾಜಿ ಅಧ್ಯಕ್ಷ ದಿಲೀಪ ಗಿರಗಂಟೆ, ಶಿಕ್ಷಕ ಗೋವಿಂದ ಗುರೂಜಿ, ಸಮಾಜ ಸಂಘದ ಪ್ರಧಾನ ಕಾರ್ಯದರ್ಶಿ ತುಕಾರಾಮ ರೊಡ್ಡೆ ಮಾತನಾಡಿದರು. ಹೂಗಾರ ಸಮಾಜದ ಜಿಲ್ಲಾಧ್ಯಕ್ಷ ವಿಠಲ್ ಹೂಗಾರ, ತಾಲೂಕು ಉಪಾಧ್ಯಕ್ಷ ವಿಜಯಕುಮಾರ ಜಮಾದಾರ, ಪ್ರಮುಖರಾದ ಶ್ರೀಶೈಲ ಕಾಚಾಪುರ, ಉಮಾಕಾಂತ ಭಂಗೆ, ಪ್ರಭು ಬಿರಾದಾರ, ರಾಜು ತಳವಾರ, ದಶರಥ ಜಾಧವ್, ಮಾಣಿಕರಾವ ಗೊರಮೂಡೆ, ಈಶ್ವರ ಜಮಾದಾರ, ಹಣಮಂತ ಜಮಾದಾರ, ಪ್ರಶಾಂತ ಚಾರ್ಲಾ, ಸುಭಾಷ ಚಾಟ್ಲೆ, ಪುಂಡಲಿಕ ಬೊಕ್ಕೆ, ಅಣ್ಣೆಪ್ಪ ಚಿಟ್ಟಮಪಲ್ಲೆ, ದೈವತಾ, ಕಮಾಂಡೋ ಪ್ರಕಾಶ್ ಜಮಾದಾರ, ಕಾಂತಪ್ಪ ಬೊಕ್ಕೆ, ಹಣಮಂತ ಇರ್ಲೆ, ಬಳಿರಾಮ ಇರ್ಲೆ, ನಾಗನಾಥ ಚಾಮಲೆ ಇತರರಿದ್ದರು.

ಹಣಮಂತ ಜಮಾದಾರ ಸ್ವಾಗತಿಸಿದರು. ತುಕಾರಾಮ ರೊಡ್ಡೆ ನಿರೂಪಣೆ ಮಾಡಿದರು. ಶಿಕ್ಷಕ ಅಣ್ಣೆಪ್ಪ ವಂದಿಸಿದರು.