ಚಿಕ್ಕಮಗಳೂರು: ಪಂಚಗ್ಯಾರAಟಿ ಯೋಜನೆ ಸದ್ಬಳಕೆಯಲ್ಲಿ ಜಿಲ್ಲೆ ಪ್ರಥಮ ಸ್ಥಾನದಿಂದ ಕೆಳಕ್ಕಿಳಿಯಬಾರದು ಎಂಬ ಉz್ದೆÃಶದಿಂದ ವಿವಿಧ ಇಲಾಖೆ ಅಧಿಕಾರಿ ವೃಂದದೊAದಿಗೆ ಸಭೆ ನಡೆಸಿ ಸಾಧಕ-ಬಾಧಕ ಚರ್ಚಿಸಲಾಗುತ್ತಿದೆ ಎಂದು ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನAದಸ್ವಾಮಿ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿಯ ಗ್ಯಾರಂಟಿ ಕಚೇರಿಯಲ್ಲಿ ಸೋಮವಾರ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ರಾಜ್ಯಸರ್ಕಾರ ೫೧ ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿಗೆ ಮೀಸಲಿಟ್ಟು ಬಹುದೊಡ್ಡ ತೀರ್ಮಾನ ಕೈಗೊಂಡಿದೆ. ಅಲ್ಲದೇ ಜಿಲ್ಲೆಯ ಪ್ರತಿ ತಾಲೂಕು ಮಟ್ಟದಲ್ಲೂ ಅಧ್ಯಕ್ಷರು ಸಭೆಗಳನ್ನು ನಡೆಸಿ ಜನಸಾಮಾನ್ಯರ ನೆರವಾಗುತ್ತಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯ ಒಂದಿಷ್ಟು ಮಹಿಳೆಯರು ಹೊಸ ಪಡಿತರ ಕಾರ್ಡ್ಗಳನ್ನು ಯಜಮಾನಿ ಎಂಬ ಕಾರಣಕ್ಕೆ ಮಾಡಿಸಿದ್ದಾರೆ. ಅವರೆಲ್ಲರನ್ನು ಕೂಡಾ ಗೃಹಲಕ್ಷಿö್ಮÃ ಯೋಜನೆಯಡಿ ಫಲಾನುಭವಿಗಳಾಗಿಸಿ ಪ್ರತಿ ತಿಂಗಳು ೨ ಸಾವಿರ ರೂ. ಹಣ ಅವರ ಖಾತೆಗೆ ಜಮೆ ಮಾಡಿಸಬೇಕು. ಈ ಮೂಲಕ ಶೇ.೧೦೦ರಷ್ಟು ಪ್ರಗತಿ ಸಾಧಿಸಬೇಕು ಎಂದರು.
ಗೃಹಲಕ್ಷಿö್ಮÃ ಯೋಜನೆ ಆರಂಭದಿAದ ಕಳೆದ ಡಿಸೆಂಬರ್‌ವರೆಗೆ ಯಜಮಾನಿ ಖಾತೆಗೆ ನಗದು ಜಮೆಗೊಂಡಿದೆ. ಇನ್ನುಳಿದಂತೆ ಜನವರಿ ಮತ್ತು ಫೆಬ್ರವರಿ ನಗದು ಬಾಕಿಯಿದ್ದು, ಕುಟುಂಬದ ಯಜಮಾನಿಯರು ಭಯ ಹಾಗೂ ಅಪನಂಬಿಕೆಗೆ ಒಳಗಾಗದೇ ಧೈರ್ಯದಿಂದಿರÀಬೇಕು ಎಂದು ಭರವಸೆ ನೀಡಿದರು.
ಅನ್ನಭಾಗ್ಯದಡಿ ಕುಟುಂಬದ ಪ್ರತಿ ವ್ಯಕ್ತಿಗೆ ೫ ಕೆಜಿ ಅಕ್ಕಿ ಮತ್ತು ನಗದನ್ನು ಆಹಾರ ಇಲಾಖೆ ಮುಖಾಂತರ ಜಿಲ್ಲೆಯ ಕಾರ್ಡ್ದಾರ ಯಜಮಾನಿಯರಿಗೆ ಒಟ್ಟು ೧೩ ಕೋಟಿ ರೂ. ಖಾತೆಗೆ ಜಮೆ ಮಾಡಲಾಗಿತ್ತು. ಇದೀಗ ಫೆಬ್ರವರಿ ತಿಂಗಳಿAದ ನಗದು ಬದಲಾಗಿ ಪ್ರತಿ ವ್ಯಕ್ತಿಗೆ ೧೦ ಕೆಜಿ ಅಕ್ಕಿ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಮಹಿಳೆಯರು ಶಕ್ತಿಯೋಜನೆಯಲ್ಲಿ ಉಚಿತವಾಗಿ ಪ್ರಯಾಣಿಸುವ ಮೂಲಕ ಸದ್ಬಳಕೆ ಮಾಡಿಕೊಂಡಿದ್ದಾರೆ. ಉಚಿತ್ ವಿದ್ಯುತ್‌ಚ್ಚಕ್ತಿಯಡಿ ಜಿಲ್ಲೆಯ ಸುಮಾರು ೨.೫೦ ಲಕ್ಷ ಮೀಟರ್‌ಗಳಿಗೆ ಶೂನ್ಯ ಬಿಲ್ ಬಂದಿದ್ದು, ಈ ಯೋಜನೆಯಿಂದ ವಂಚಿತರಾದವರು ಸೇವಾಸಿಂಧು ಮುಖೇನ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.
ಯುವನಿಧಿ ಯೋಜನೆಯಲ್ಲಿ ನಿರುದ್ಯೋಗಿಗಳಿಗೆ ಅನುಕೂಲ ಕಲ್ಪಿಸಿದೆ. ಜೊತೆಗೆ ಉದ್ಯೋಗ ಮೇಳದಲ್ಲಿ ೭೦ಕ್ಕೂ ಕಂಪನಿಗಳು ಭಾಗಿಯಾಗಿ ೫೦೦ಕ್ಕೂ ಹೆಚ್ಚು ಉದ್ಯೋಗವನ್ನು ಕೌಶಲಾಭಿವೃದ್ದಿ ಇಲಾಖೆಯಿಂದ ಕಲ್ಪಿಸಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಅಭೂತಪೂರ್ವ ಯಶಸ್ಸು ಗಳಿಸುವ ಮೂಲಕ ಜನಸಾಮಾನ್ಯರ ಆರ್ಥಿಕ, ಸಾಮಾಜಿಕ ನೆರವಿಗೆ ಗ್ಯಾರಂಟಿ ಅನುಷ್ಟಾನ ಪೂರಕವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷರಾದ ಸಮೀವುಲ್ಲಾ, ಹೇಮಾವತಿ, ಮಂಜುಮಾಥ್, ಚಂದ್ರಮೌಳಿ, ಮೆಸ್ಕಾಂ ಇಲಾಖೆ ಅಧಿಕಾರಿ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.