ಕಲಬುರಗಿ: ಕ್ಷಮೆ, ವಿವೇಚನೆಯಂಥ ಸಾತ್ವಿಕ ಭಾವದಿಂದ ಅರ್ಚಿಸಲ್ಪಡುವ ಲಿಂಗವೇ ಭಾವಲಿಂಗ ಎಂದು ಕಾಶಿ ಜಗದ್ಗುರು ಶ್ರೀ ಡಾ.ಚಂದ್ರಶೇಖರ ಶಿವಾಚಾರ್ಯ ನುಡಿದರು.
ಸೊಗಸನಗೇರಿಯ ಗುರುಶಾಂತ ಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ಏರ್ಪಡಿಸಿದ್ದ ಸಿದ್ಧಾಂತ ಶಿಖಾಮಣಿ ಪ್ರವಚನ ಕಾರ್ಯಕ್ರಮದಲ್ಲಿ ಆರ್ಶಿರ್ವಚನ ನೀಡಿದ ಅವರು, ಇಷ್ಟಲಿಂಗವನ್ನು ಅರ್ಚಿಸಲು ಜಲ, ಭಸ್ಮ, ಗಂಧ, ಬಿಲ್ವ, ಮೊದಲಾದ ಸಾಮಗ್ರಿಗಳು ಬಳಸಲ್ಪಡುತ್ತವೆ. ಆದರೆ ಆತ್ಮದ ಚಿದ್ರೋಪವಾದ ಭಾವಲಿಂಗ ಅರ್ಚಿಸಲು ಭಾವನಾಮಯ ಸಾಮಗ್ರಿಗಳೇ ಬೇಕು ಎಂದರು.
ಕ್ಷಮೆಯೇ ಅಭಿಷೇಕ ಜಲ, ವಿವೇಕವೇ ವಸ್ತç, ಸತ್ಯ ನುಡಿಯುವುದೇ ಆವರಣ, ವೈರಾಗ್ಯವೇ ಪುಷ್ಪಮಾಲೆ, ಸಮಾಧಿ ಸ್ಥಿತಿಗೆ ಗಂಧ, ನಿರಹಂಕಾರ ಭಾವನೆಯೇ ಅಕ್ಷತೆ, ಶ್ರದ್ಧೆಯೇ ಧೂಪ, ಜ್ಞಾನವೇ ದೀಪ, ಭ್ರಾಂತಿಯನ್ನು ತ್ಯಜಿದಸುವುದೇ ನೈವೇದ್ಯ, ಮೌನವೇ ಘಂಟಾನಾದ, ವಿಷಯಗಳ ಭ್ರಾಂತಿ ಕಳೆದುಕೊಳ್ಳುವುದೇ ಪ್ರದಕ್ಷಿಣೆ, ಲಿಂಗದೊAದಿಗೆ ಸಮರಸತೆ ಸಾಧಿಸುವುದೇ ನಮಸ್ಕಾರ ಹೀಗೆ ತನ್ನ ಮನಸ್ಸಿನ ಸಾತ್ವಿಕ ಭಾವನೆಗಳಿಂದ ಅರ್ಚಿಸಲ್ಪಡುವ ಲಿಂಗವೇ ಭಾವಲಿಂಗ ಎಂದು ಪ್ರತಿಪಾದಿಸಿದರು.
ಕಡಗಂಚಿ ಶ್ರೀ ವೀರಭದ್ರ ಶಿವಾಚಾರ್ಯ ನೇತೃತ್ವ ವಹಿಸಿದ್ದರು. ನೀಲಗಲದ ಶ್ರೀ ಶಾಂತಮಲ್ಲ ಶಿವಾಚಾರ್ಯ, ರಾಯಚೂರಿನ ಶ್ರೀ ವೀರ ಅಭಿನವ ರಾಚೋಟಿ ಶಿವಾಚಾರ್ಯ, ಆಲಮೇಲದ ಶ್ರೀ ಗುರುಲಿಂಗ ಶಿವಾಚಾರ್ಯ, ಮಂಗಳವಾರ ಪೇಟೆಯ ಶ್ರೀ ವೀರಸಂಗಮೇಶ್ವರ ಶಿವಾಚಾರ್ಯ, ಚಿಣಮಗೇರಿ ಶ್ರೀ ಅಭಿನವ ಮಹಾಂತೇಶ್ವರ ಶಿವಾಚಾರ್ಯ, ಪಾಳಾದ ಶ್ರೀ ಡಾ.ಗುರುಮೂರ್ತಿ ಶಿವಾಚಾರ್ಯ, ಮಹಾಪೌರ ಯಲ್ಲಪ್ಪ ನಾಯ್ಕೋಡಿ, ಉಪ ಮಹಾಪೌರ ಹೀನಾ ಬೇಗಂ, ಪ್ರಮುಖರಾದ ಶರಣಬಸಪ್ಪ ಬೆಣ್ಣೂರ, ಹರ್ಷಾನಂದ ಗುತ್ತೇದಾರ್, ಅಮೃತಪ್ಪ ಮಲ್ಕಪ್ಪಗೌಡ, ಶಿವಾನಂದ ಸ್ಥಾವರಮಠ, ರಾಮಲಿಂಗಪ್ಪ, ಶಿವಾನಂದ ಮಠಪತಿ ಉಪಸ್ಥಿತರಿದ್ದರು.
ಮಲ್ಲಿಕಾರ್ಜುನ ತಡಕಲ್ ಸ್ವಾಗತಿಸಿದರು. ಶಿವಯ್ಯ ಮಠಪತಿ ನಿರೂಪಣೆ ಮಾಡಿದರು. ರಾಮಲಿಂಗಯ್ಯ ಸ್ವಾಮಿ, ಮಹಾಂತಯ್ಯ ಸ್ವಾಮಿ ಅವರಿಂದ ಸಂಗೀತ ಹಾಗೂ ಸುಂಟನೂರಿನ ಸಿz್ದೆÃಶ್ವರ ಶಾಸ್ತಿçಗಳಿಂದ ಲಿಂಗದೀಕ್ಷೆ, ಅಯ್ಯಾಚಾರ ನೆರವೇರಿತು.