ಜಿಲ್ಲೆ

ಸಾಗರ: ತಾಯಿ ಸಾವಿನಿಂದ ನೊಂದ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ

ಸಾಗರ: ನಗರದ ಹೊಸ ಬಡಾವಣೆಯಲ್ಲಿ ಭಾನುವಾರ ತಾಯಿಯ ಸಾವಿನಿಂದ ಮನನೊಂದ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾಗರಾಜ್(23) ಆತ್ಮಹತ್ಯೆ ಮಾಡಿಕೊಂಡ ಯುವಕ. ಪಟ್ಟಣದ ಗ್ಯಾಸ್ ಬಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ್ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಎರಡು ದಿನಗಳ ಹಿಂದೆಯಷ್ಟೇ ಸ್ನೇಹಿತರೊಂದಿಗೆ ನಾಗರಾಜ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದನು. ಈತನ ತಾಯಿ ತೀರಿಕೊಂಡು ಸೋಮವಾರಕ್ಕೆ ಒಂದು ವರ್ಷ ಆಗಲಿತ್ತು. ಮನೆಯಲ್ಲಿ ಒಬ್ಬಂಟಿ ಆಗಿದ್ದ ನಾಗರಾಜ್ ತಾಯಿಯ ಅಗಲಿಕೆಯಿಂದ ಮಾನಸಿಕವಾಗಿ ನೊಂದಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.