ಜಿಲ್ಲೆ

ಸಾಕ್ಷರತೆ ಮೂಲಕ ಸರ್ವಾಂಗೀಣ ಪ್ರಗತಿ ಸಾಧಿಸಿ

ಕಂಪ್ಲಿ: ಮಹಿಳೆಯರು ನಾನಾ ಕ್ಷೇತ್ರಗಳಲ್ಲಿ ಮುನ್ನುಗ್ಗುವ ಮೂಲಕ ಯಶಸ್ಸು ಸಾಧಿಸಬೇಕಿದೆ ಎಂದು ವೀರಶೈವ ಸಂಘದ ತಾಲೂಕು ಅಧ್ಯಕ್ಷ ಪಿ.ಮೂಕಯ್ಯಸ್ವಾಮಿ ಹೇಳಿದರು.

ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಅಕ್ಕಮಹಾದೇವಿ ಮಹಿಳಾ ಮಂಡಳಿಯಿಂದ ಆಯೋಜಿಸಿದ್ದ ಅಕ್ಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಭಾನುವಾರ ಮಾತನಾಡಿದರು. ಮಹಿಳೆಯರು ಸಾಕ್ಷರರಾಗುವ ಮೂಲಕ ಸರ್ವಾಂಗೀಣ ಪ್ರಗತಿ ಸಾಧಿಸಬೇಕಿದೆ ಎಂದರು.

ಅಕ್ಕಮಹಾದೇವಿ ಮಹಿಳಾ ಮಂಡಳಿ ಅಧ್ಯಕ್ಷೆ ಮುಕ್ಕುಂದಿ ಶಿವಗಂಗಮ್ಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಿಗೆ ತಾರತಮ್ಯರಹಿತ ಶಿಕ್ಷಣ, ಪೋಷಣೆ ಮತ್ತು ಅವಕಾಶ ಕಲ್ಪಿಸಲು ಪಾಲಕರು ಮುಂದಾಗಬೇಕು ಎಂದರು. ಕೆ.ಎಂ.ಶ್ರೀರಕ್ಷಾ ವಚನ ಗಾಯನ ಪ್ರಸ್ತುತಪಡಿಸಿದರು.

ಸಮಾಜ ಸೇವೆಗಾಗಿ ಎಚ್.ಸಂಗೀತಾ, ವಾಲಿ ಶಾರದಾ, ಜೆ.ಎಂ.ಶೋಭಾ, ಸಿ.ಕೆ.ಶೋಭಾ, ಬಿ.ಸುನಿತಾ, ಎಂ.ವಸಂತಾ, ಎಂ.ಜಯಶ್ರೀ, ಎಂ.ಶಾರದಾ, ಬಿ.ಎಂ.ಪುಷ್ಪಾ, ಎಸ್.ವಿ.ಜಯಲಕ್ಷ್ಮೀ, ಟಿ.ಎಂ.ವಿಜಯಲಕ್ಷ್ಮೀ, ರತ್ನಮ್ಮ, ಸಜ್ಜೇದ ಸುಶೀಲ ಅವರಿಗೆ ಅಕ್ಕ ಪ್ರಶಸ್ತಿ ನೀಡಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳು, ಸಾಧಕರು ಹಾಗೂ ದಾನಿಗಳನ್ನು ಗೌರವಿಸಲಾಯಿತು.

ಪ್ರಮುಖರಾದ ವಾಲಿ ಕೊಟ್ರಪ್ಪ, ಎಸ್.ಎಸ್.ಎಂ.ಚನ್ನಬಸವರಾಜ, ಎಸ್.ಎಂ.ನಾಗರಾಜ, ಎಚ್.ಜಗದೀಶ, ಮಂಡಳಿ ಪದಾಧಿಕಾರಿಗಳಾದ ಭತ್ತದ ಸಂಧ್ಯಾ, ಕೆ.ಎಂ.ಸೌಮ್ಯಾ, ತಾಂಡೂರು ಸುಜಾತಾ, ನಿರ್ದೇಶಕರು, ವೀರಶೈವ ಸಮಾಜದ ನಾನಾ ಸಮಿತಿ ಪದಾಧಿಕಾರಿಗಳು, ಪ್ರಮುಖರು ಇದ್ದರು.