ಚಾಮರಾಜನಗರ : ವಿದ್ಯುತ್ ತಂತಿಗೆ ಸಿಲುಕಿದ ನಾಯಿಯನ್ನು ರಕ್ಷಿಸಲು ಹೋಗಿ ಮಾಲೀಕ ಮೃತಪಟ್ಟಿದ್ದಾನೆ. ನಗರದ ಜಾಲಹಳ್ಳಿಹುಂಡಿ ಹೊಸ ಬಡಾವಣೆಯಲ್ಲಿ ವಿದ್ಯುತ್ ತಂತಿಗೆ ಸಾಕು ನಾಯಿಯೊಂದು ಸಿಲುಕಿ ಒದ್ದಾಡುತ್ತಿತ್ತು. ಇನ್ನು ಗಮನಿಸದೆ ನಾಯಿಯನ್ನು ಎತ್ತಿಕೊಳ್ಳಲು ಹೋದ ಮಾಲೀಕ ಚಂದ್ರುಗೂ (40) ವಿದ್ಯುತ್ ಸ್ಪರ್ಶವಾಗಿದೆ.
ಕೂಡಲೇ ನೆರೆಹೊರೆಯವರು ಚಂದ್ರುರವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟರು. ಸ್ಥಳಕ್ಕೆ ಪೊಲೀಸರು, ಕೆಇಬಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.