ಸಾಗರದ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದಿಂದ ಆಯೋಜಿಸಿದ್ದ ಕಲೋಪಾಸನಾ ಕಾರ್ಯಕ್ರಮವನ್ನು ನಗರಸಭಾ ಅಧ್ಯಕ್ಷೆ ಮೈತ್ರಿ ಪಾಟೀಲ್ ಉದ್ಘಾಟಿಸಿದರು. ಕೆ.ಎನ್.ನಾಗೇಂದ್ರ, ಭಾವನಾ ಸಂತೋಷ್, ಮಧುಮಾಲತಿ ಇತರರಿದ್ದರು. 
ಜಿಲ್ಲೆ

ಸಾಂಸ್ಕೃತಿಕ ಸೇವೆ ದೇವಿಗೆ ಅತ್ಯಂತ ಪ್ರಿಯ

ಸಾಗರ: ನವರಾತ್ರಿ ಸಂದರ್ಭದಲ್ಲಿನ ನೃತ್ಯ, ಸಂಗೀತ ಸೇವೆ ದೇವಿಗೆ ಅತ್ಯಂತ ಪ್ರಿಯವಾದದ್ದು. ಮಾರಿಕಾಂಬಾ ದೇವಿ ಸನ್ನಿಯಲ್ಲಿ ಧಾರ್ಮಿಕ ಸೇವೆ ಜತೆ ಸಾಂಸ್ಕೃತಿಕ ಸೇವೆ ನಡೆಸಿ ಕಲಾವಿದರಿಗೆ ಸಹಕಾರ ನೀಡುತ್ತಿರುವುದು ಸ್ವಾಗತಾರ್ಹ ಎಂದು ನಗರಸಭೆ ಅಧ್ಯಕ್ಷೆ ಮೆತ್ರಿ ಪಾಟೀಲ್ ಹೇಳಿದರು.

ಸಾಗರದ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದಿಂದ ನವರಾತ್ರಿ ಅಂಗವಾಗಿ ಏರ್ಪಡಿಸಿದ್ದ ಕಲೋಪಾಸನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಾತ್ರೆಯು ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡುತ್ತದೆ. ನಾಡಿನ ಬೇರೆ ಬೇರೆ ಭಾಗದಿಂದ ಕಲಾವಿದರು ಬಂದು ಸಾಂಸ್ಕೃತಿಕ ಪ್ರದರ್ಶನ ನೀಡುವ ಮೂಲಕ ಸಂಸ್ಕೃತಿ ವಿನಿಮಯವಾಗುತ್ತದೆ. ಸಾಗರ ಅನೇಕ ಕಲೆಗಳಿಗೆ ಆಶ್ರಯತಾಣ ಎಂದರು.

ಪ್ರತಿಷ್ಠಾನದ ಅಧ್ಯಕ್ಷ ಕೆ.ಎನ್.ನಾಗೇಂದ್ರ, ಭಾವನಾ ಸಂತೋಷ್, ಮಧುಮಾಲತಿ, ಲಲಿತಮ್ಮ, ಸುಂದರ ಸಿಂಗ್, ಗಿರಿಧರ ರಾವ್, ನಾಗೇಂದ್ರ ಕುಮಟಾ, ಲೋಕೇಶ್‌ಕುಮಾರ್ ಇತರರಿದ್ದರು.