ಜಿಲ್ಲೆ

ಸಾಂಸ್ಕೃತಿಕ ರಾಯಭಾರಿ ಇನ್ನಿಲ್ಲ

ಸುರಪುರ: ಮಾಜಿ ಸಚಿವ, ಹಿರಿಯ ರಾಜಕೀಯ ಮುತ್ಸದ್ದಿ ಹಾಗೂ ಸಗರನಾಡಿನ ಸಾಂಸ್ಕೃತಿಕ ರಾಯಭಾರಿ ರಾಜಾ ಮದನಗೋಪಾಲ ನಾಯಕ (69) ಅವರು ಸೋಮವಾರ ಕರೊನಾಕ್ಕೆ ಬಲಿಯಾಗಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಪುತ್ರರಿದ್ದಾರೆ. ಎರಡು ಬಾರಿ ಶಾಸಕರಾಗಿ ಒಂದು ಬಾರಿ ಮಂತ್ರಿಯಾಗಿ ಅವರು ಸೇವೆ ಸಲ್ಲಿಸಿದ್ದರು.

ಕರೊನಾ ವೈರಸ್ಗೆ ತುತ್ತಾದ ರಾಜ್ಯದ ಮೊದಲ ಮಾಜಿ ಸಚಿವರಾಗಿದ್ದಾರೆ. ಕಳೆದ ಒಂದುವಾರದಿಂದ ನಿಮೊನಿಯಾ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಕಲಬುರಗಿಯ ಇಎಸ್ಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಅವರ ರಕ್ತ ಮತ್ತು ಗಂಟಲು ದ್ರವ ಪರೀಕ್ಷೆ ಮಾಡಿದಾಗ ಕರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ನಂತರ ಅವರಿಗೆ ಚಿಕಿತ್ಸೆ ಮುಂದುವರಿಸಿದ್ದರೂ ಫಲಕಾರಿಯಗದೇ ಮೃತಪಟ್ಟಿದ್ದಾರೆ ಎಂದು ಹೇಳಾಗಿದೆ.

1974ರಲ್ಲಿ ಕಾಂಗ್ರೆಸ್ ಪಕ್ಷ ಸೇರುವ ಮೂಲಕ ತಮ್ಮ ರಾಜಕೀಯ ಜೀವನ ಆರಂಭಿಸಿದ ಅವರು, 1983ರಲ್ಲಿ ಸುರಪುರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯಥರ್ಿಯಾಗಿ ಆಯ್ಕೆಯಾಗಿ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದರು. 1985 ಮತ್ತು 1989ರಲ್ಲಿ ಮೂರನೇ ಬಾರಿ ವಿಧಾನಸಭೆ ಪ್ರವೇಶಿಸಿ ಹ್ಯಾಟ್ರಿಕ್ ಗೆಲವು ಸಾಧಿಸುವ ಮೂಲಕ 1992ರಿಂದ 94ರವರೆಗೆ ಎಂ. ವೀರಪ್ಪ ಮೋಯ್ಲಿ ಅವರ ಸಚಿವ ಸಂಪುಟದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರಾಗಿ ಹಲವು ಬದಲಾವಣೆ ತಂದರು.

ಮುಂದೆ ಅವರಿಗೆ ರಾಜಕೀಯದಲ್ಲಿ ಸ್ಪಧರ್ಿಸಲು ಅವಕಾಶ ಸಿಗಲಿಲ್ಲ. ಅಲ್ಲಿಂದ ಅವರು ಹೆಚ್ಚೂ-ಕಡಿಮೆ 20 ವರ್ಷ ರಾಜಕೀಯ ಅನುಭವಿಸಿದ್ದರು. ಮುಂದೆ 2014ರಲ್ಲಿ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ರಾಯಚೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯಥರ್ಿಯಾಗಿ ಸ್ಪಧರ್ಿಸಿ ಕಾಂಗ್ರೆಸ್ ಅಭ್ಯಥರ್ಿ ವಿರುದ್ಧ ಕೇವಲ 500 ಮತಗಳ ಅಂತರದಿಂದ ಸೋಲು ಅನುಭವಿಸಿದರು.

ಒಂದು ಹಂತದಲ್ಲಿ ಮದನ ಗೋಪಾಲ ನಾಯಕ ಶಾಸಕ ನರಸಿಂಹ ನಾಯಕ್ ಅವರೊಡನೆ ರಾಜಕೀಯ ಮಾಡಿದ್ದರು. ಮುಂದೆ 2018ರಲ್ಲಿ ಮತ್ತೇ ಕಾಂಗ್ರೆಸ್ ಸೇರಿ ರಾಜಾ ವೆಂಕಟಪ್ಪ ನಾಯಕರನ್ನು ಬೆಂಬಲಿಸಿದರು. ಅದಾದ ಮೇಲೆ ಕಳೆದ ಎರಡು ವರ್ಷಗಳಿಂದ ಅವರು ರಾಜಕೀಯವಾಗಿ ತಮ್ಮನ್ನು ತೊಡಗಿಸಿಕೊಂಡಿರಲಿಲ್ಲ. ರಾಜಕಾರಣಿಯಾಗಿದ್ದರೂ, ಸಾಂಸ್ಕೃತಿಕವಾಗಿ ಸಾಹಿತ್ಯಕವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಮದನ ಗೋಪಾಲ ನಾಯಕರು ಅನ್ಯ ಕ್ಷೇತ್ರಗಳಲ್ಲಿಯೂ ಹೆಸರು ಮಾಡಿದ್ದರು.

ನಾಯಕ ಅವರು, ಅನುದಾನದ ಕೊರತೆಯ ಮಧ್ಯೆಯೂ ಸುರಪುರ ಮತಕ್ಷೇತ್ರದಲ್ಲಿ ಅನೇಕ ಜನಪರ ಕೆಲಸ ಮಾಡಿದ್ದರು. ಹಾಗೆ ಮಾರುಕಟ್ಟೆಗಳ ಸ್ಥಾಪನೆ, ನಗರಕ್ಕೆ ಒಳಚರಂಡಿ ವ್ಯವಸ್ಥೆ, ರಸ್ತೆಗಳು ಇನ್ನು ಅನೇಕ ಜನಪರ ಕಾರ್ಯ ಕೈಗೊಂಡಿದ್ದರು. ಸುರಪುರದ ಕನ್ನಡ ಸಾಹಿತ್ಯ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ನಿಂದ ಅನೇಕ ಸಾಹಿತಿಗಳ ಪುಸ್ತಕ ಹೊರತರಲು ಪ್ರೋತ್ಸಾಹಿಸಿದ್ದರು.

ಶೋಕ ಸಂತಾಪ: ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಅವರ ನಿಧನಕ್ಕೆ ಶಾಸಕ ನರಸಿಂಹ ನಾಯಕ, ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ, ತಾಲೂಕು ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಶ್ರೀನಿವಾಸ ಜಾಲವಾದಿ, ಬಸವರಾಜಪ್ಪ ಜಮದಾರಖಾನಿ, ಶಾಂತಪ್ಪ ಬೂದಿಹಾಳ, ದತ್ತಾತ್ರೇಯ ಗುತ್ತೇದಾರ, ಪ್ರಕಾಶ ಗುತ್ತೇದಾರ, ರಾಕೇಶ ಹಂಚಾಟೆ, ಸಂಪತಕುಮಾರ, ಹಣಮಂತ್ರಾಯ ದೊರೆ, ಸಂತೋಶ, ರಾಜಶೇಖರ ದೇಸಾಯಿ, ಸೇರಿ ಅನೇಕರು ಶೋಕ ಸಂತಾಪ ಸೂಚಿಸಿದ್ದಾರೆ.