ಮುಧೋಳ ತಾಲೂಕಿನ ಯಡಹಳ್ಳಿ ಸರ್ಕಾರಿ ಪ್ರಥಮ ದರ್ಜೆಯ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ನಡೆದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ತರಹೇವಾರಿ ಅಡುಗೆ. 
ಜಿಲ್ಲೆ

ಸಾಂಪ್ರದಾಯಿಕ ಉಡುಗೆಯಲ್ಲಿ ಗಮನ ಸೆಳೆದ ವಿದ್ಯಾರ್ಥಿಗಳು

ಬಾಗಲಕೋಟೆ: ಮುಧೋಳ ತಾಲೂಕಿನ ಯಡಹಳ್ಳಿ ಸರ್ಕಾರಿ ಪ್ರಥಮ ದರ್ಜೆಯ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ಕಾಲೇಜು ಶಿಕ್ಷಣ ಇಲಾಖೆ, ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯ ಆಶ್ರಯದಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನವು ಆಕರ್ಷಿಸಿತು.

ಸಮ್ಮೇಳನದ ಪ್ರಯುಕ್ತ ಸಾಂಪ್ರದಾಯಿಕ ಉಡುಗೆ ತೊಡುಗೆ ಬಂದಿದ್ದ ವಿದ್ಯಾರ್ಥಿಗಳು ಹಳ್ಳಿ ಸಂಸ್ಕೃತಿ, ಪರಂಪರೆ ಸಾಕ್ಷಿಕರಿಸಿದರು. ಅಪ್ಪಟ ದೇಶಿಯ ಶೈಲಿಯಲ್ಲಿ ಸಾವಯವ ತರಕಾರಿ, ದವಸ ಧಾನ್ಯಗಳನ್ನು ಹಾಗೂ ಇತರೆ ಸಾಮಗ್ರಿಗಳನ್ನು ಉಪಯೋಗಿಸಿ ವಿವಿಧ ತರಹೇವಾರಿ ಖಾದ್ಯಗಳನ್ನು ವಿದ್ಯಾರ್ಥಿಗಳೇ ಮನೆಯಿಂದ ಸಿದ್ದಪಡಿಸಿಕೊಂಡು ಎಲ್ಲರಿಗೂ ಉಣಬಡಿಸಿದರು. ಸಾಮೂಹಿಕ ಭೋಜನ ಎಲ್ಲರನ್ನು ಆಕರ್ಷಿಸಿತು.

ಯಡಹಳ್ಳಿಯ ಎಸ್.ಬಿ.ಹೊರಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವಿ.ಪಿ.ಪೆಟ್ಲೂರ, ಆಧುನೀಕರಣದ ನೆಪದಲ್ಲಿ ನಮ್ಮ ಸಂಸ್ಕೃತಿ, ಸಾಹಿತ್ಯ, ಜೀವನ ಪದ್ಧತಿ ಬದಲಾಗುತ್ತಿದೆ. ಪಾಸ್ಟ್ ಫುಡ್ ಹಾವಳಿಯಿಂದ ಆರೋಗ್ಯವು ಕೈಕೊಡುತ್ತಿದೆ. ನಮ್ಮ ಹಳೇ ಆಹಾರ ಪದ್ಧತಿ ಅನುಸರಿಸಿ ಪೌಷ್ಠಿಕಾಂಶ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಡಾ.ಅಶೋಕ ಉಟಗಿ, ಉಪನ್ಯಾಸಕರಾದ ಎನ್.ಜಿ.ನೀಲವಾಣಿ, ಸುರೇಶ ಪಟೇದ, ಸಂಜೇಯ ಕುಂಬಾರ, ಸವಿತಾ ಹೂಗಾರ, ಮಂಜುನಾಥ ತೋಳಮಟ್ಟಿ, ಸಂಜೇಯ ರಾಮೋಶಿ, ಆನಂದ ಬುರ್ಲಿ, ಶ್ರೀನಿವಾಸ ಯರಗುದ್ರಿ ಇದ್ದರು. ಡಾ.ಲೋಕಣ್ಣ ಭಜಂತ್ರಿ ಸ್ವಾಗತಿಸಿದರು. ಸವಿತಾ ಹಲಸಗಿ ನಿರೂಪಿಸಿದರು. ಸವಿತಾ ಹೂಗಾರ ವಂದಿಸಿದರು.